ಯುವತಿಗೆ ಕಿರುಕುಳ: ಆರೋಪ

Update: 2017-08-15 14:31 GMT

ಬೆಂಗಳೂರು, ಆ.15: ಒಂಟಿಯಾಗಿ ವಾಸವಾಗಿದ್ದ ಯುವತಿಯ ಮನೆ ಬಾಗಿಲು ಬಡಿದು ಆಕೆಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಇಲ್ಲಿನ ಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಯನಗರ 5ನೆ ಬ್ಲಾಕ್‌ನಲ್ಲಿ ವಾಸವಿರುವ ಯುವಕನೊಬ್ಬ ತಡರಾತ್ರಿ ತಮ್ಮ ಮನೆ ಸಮೀಪದಲ್ಲೇ ಒಂಟಿಯಾಗಿ ವಾಸವಿರುವ ಯುವತಿಯ ಮನೆಯ ಬಾಗಿಲನ್ನು ತಟ್ಟಿದ್ದಾನೆ ಎನ್ನಲಾಗಿದೆ.

ಯುವತಿ ಬಾಗಿಲು ತೆರೆದಾಗ ಆಕೆಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ. ಯುವತಿ ಜೋರಾಗಿ ಕಿರುಚಿಕೊಂಡಾಗ ಆರೋಪಿ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಠಾಣೆ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ಆತನ ವಿರು್ಧ ಸೂಕ್ತ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News