ಮತ್ತೆ ಬೀದಿ ನಾಯಿಗಳ ಹಾವಳಿ: ಯುವತಿಯನ್ನು ಎಳೆದಾಡಿದ ನಾಯಿಗಳ ಗುಂಪು

Update: 2017-08-16 15:10 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.16: ಬಿಬಿಎಂಪಿ ವ್ಯಾಪ್ತಿ ಮತ್ತೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಗರದ ರಸ್ತೆಯೊಂದರಲ್ಲಿ ನಾಯಿಗಳ ಗುಂಪು ಯುವತಿಯೊಬ್ಬಳನ್ನು ಕೆಳಗೆ ತಳ್ಳಿ ಎಳೆದಾಡಿರುವ ದುರ್ಘಟನೆ ತಡವಾಗಿ ತಿಳಿದುಬಂದಿದೆ.

ನಗರದ ಎಂಎಸ್ ರಾಮಯ್ಯ ಆಸ್ಪತ್ರೆ ರಸ್ತೆಯಲ್ಲಿ ಏಳೆಂಟು ನಾಯಿಗಳು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಯುವತಿಯೊಬ್ಬಳನ್ನು ಕೆಳಗೆ ತಳ್ಳಿ ಎಳೆದಾಡಿ, ಕಚ್ಚಿ ಗಾಯ ಮಾಡಿರುವ ದೃಶ್ಯ ರಸ್ತೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಯುವತಿ ಯಾರೆಂದು ಇನ್ನೂ ತಿಳಿದುಬಂದಿಲ್ಲ. ಅಷ್ಟೇ ಅಲ್ಲದೆ, ಅದೇ ನಾಯಿಗಳು ನಾಲ್ಕೈದು ಮಂದಿಯನ್ನು ಎಳೆದಾಡಿವೆ ಎಂದು ಹೇಳಲಾಗುತ್ತಿದೆ. ಇದಕ್ಕೆಲ್ಲಾ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಆರೋಪಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News