ಸಿನ್ಸಿನಾಟಿ ಮಾಸ್ಟರ್ಸ್: ಸಾನಿಯಾ ಜೋಡಿ ಕ್ವಾರ್ಟರ್ ಫೈನಲ್ ಗೆ

Update: 2017-08-17 10:00 GMT

ಒಹಿಯೊ, ಆ.17: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಹಾಗೂ ಅವರ ಚೀನಾದ ಜೊತೆಗಾರ್ತಿ ಪೆಂಗ್ ಶುಐ ಸಿನ್ಸಿನಾಟಿ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಬುಧವಾರ ಒಂದೂವರೆ ಗಂಟೆಗಳ ಕಾಲ ನಡೆದ ಮಹಿಳೆಯರ ಡಬಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ನಾಲ್ಕನೆ ಶ್ರೇಯಾಂಕದ ಇಂಡೋ-ಚೀನಾ ಜೋಡಿ ಜರ್ಮನಿಯ ಜುಲಿಯ ಜಾರ್ಜಸ್ ಹಾಗೂ ಉಕ್ರೇನ್‌ನ ಒಲ್ಗಾ ಸವ್‌ಚುಕ್‌ರನ್ನು 7-5, 6-4 ನೇರ ಸೆಟ್‌ಗಳಿಂದ ಮಣಿಸಿದೆ.

ಸಾನಿಯಾ-ಶುಐ ಜೋಡಿ ಮುಂದಿನ ಸುತ್ತಿನಲ್ಲಿ ರೊಮಾನಿಯದ ಜೋಡಿ ಇರಿನಾ-ಬೆಗು ಹಾಗೂ ರಾಲುಕಾ ಒಲಾರು ಅವರನ್ನು ಎದುರಿಸಲಿದೆ.

ಇದೇ ವೇಳೆ, ಭಾರತದ ಸಿಂಗಲ್ಸ್ ಆಟಗಾರ ರಾಮಕುಮಾರ್ ರಾಮನಾಥನ್ ಅಮೆರಿಕದ ವೈಲ್ಡ್‌ಕಾರ್ಡ್ ಆಟಗಾರ ಜಾರೆಡ್ ಡೊನಾಲ್ಡ್‌ಸನ್ ವಿರುದ್ಧ ಎರಡನೆ ಸುತ್ತಿನ ಪಂದ್ಯದಲ್ಲಿ 4-6, 6-2, 4-6 ಸೆಟ್‌ಗಳಿಂದ ಸೋಲುವ ಮೂಲಕ ಟೂರ್ನಿಯಿಂದ ಹೊರ ನಡೆದಿದ್ದಾರೆ.

ರಾಮ್‌ಕುಮಾರ್ ಅವೆುರಿಕದ ಆಟಗಾರನ ವಿರುದ್ಧ ಸತತ 2ನೆ ಬಾರಿ ಸೋತಿದ್ದಾರೆ. 2015ರ ಫ್ರೆಂಚ್ ಓಪನ್ ಕ್ವಾಲಿಫೈಯರ್ ಸುತ್ತಿನಲ್ಲಿ 2ನೆ ಸುತ್ತಿನಲ್ಲಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News