ಆತ್ಮಹತ್ಯೆ ಮಾಡಿಕೊಂಡ ರೌಡಿಶೀಟರ್: ಪೊಲೀಸರ ವಿರುದ್ಧ ಕಿರುಕುಳ ಆರೋಪ
Update: 2017-08-20 18:40 IST
ಬೆಂಗಳೂರು,ಆ.20: ರೌಡಿ ಶೀಟರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾರತೀನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಭಾರತೀನಗರ ನಿವಾಸಿ ಕಾರ್ತಿಕ್(27) ಮೃತಪಟ್ಟವನು ಎಂದು ತಿಳಿದು ಬಂದಿದೆ. ಶನಿವಾರ ಮನೆಯಲ್ಲಿ ಕಾರ್ತಿಕ್ ವಿಷ ಸೇವಿಸಿದ್ದ ಈತನನ್ನು ತಕ್ಷಣ ಮನೆಯವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಾರ್ತಿಕ್ ಮೃತಪಟ್ಟಿದ್ದಾನೆ. ಒಂದೂವರೆ ವರ್ಷದ ಹಿಂದೆ ಸಂಧ್ಯಾ ಎಂಬಾಕೆ ಜೊತೆ ಕಾರ್ತಿಕ್ ಮದುವೆಯಾಗಿದ್ದ.
ಪೊಲೀಸರ ಕಿರುಕುಳ ಆರೋಪ: ಕಾರ್ತಿಕ್ ಸಾವಿಗೆ ಪೊಲೀಸರ ಕಿರುಕುಳವೇ ಕಾರಣ. ಭಾರತೀನಗರ ಪೊಲೀಸರು ಪದೇ ಪದೇ ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ.