ಬ್ಲೂವೇಲ್ ಗೇಮ್ ನಿಂದ ಮಕ್ಕಳನ್ನು ರಕ್ಷಿಸಲು ಸಿಬಿಎಸ್ಇ ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧ

Update: 2017-08-21 11:20 GMT

ಹೊಸದಿಲ್ಲಿ, ಆ. 21: ಬ್ಲೂವೇಲ್ ಗೇಮ್‍ನ ಕಾರಣದಿಂದ ದೇಶ ಮತ್ತು ಜಗತ್ತಿನಾದ್ಯಂತ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರಿಂದ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(ಸಿಬಿಎಸ್‍ಇ) ಶಾಲೆಗಳಲ್ಲಿ ಮಕ್ಕಳಿಗೆ ಇಂಟರ್‍ನೆಟ್‍ನ ಸುರಕ್ಷಿತ ಬಳಕೆಯ ಕುರಿತು ಮಾರ್ಗದರ್ಶನ ನೀಡುವುದರ ಜೊತೆಗೆ ಸ್ಮಾರ್ಟ್‍ಫೋನ್, ಟ್ಯಾಬ್ಲೆಟ್, ಐಪ್ಯಾಡ್, ಲ್ಯಾಪ್‍ಟಾಪ್‍ನಂತಹ ಇಲೆಕ್ಟ್ರಾನಿಕ್ ವಸ್ತುಗಳನ್ನು ಶಾಲೆಗೆ ತರಬಾರದೆಂದು ಸೂಚಿಸಿದೆ.

 ಸಿಬಿಎಸ್‍ಇ ಶಾಲೆಯಲ್ಲಿ ಡಿಜಿಟಲ್ ಟೆಕ್ನಾಲಜಿಯ ಸುರಕ್ಷಿತ ಬಳಕೆ ಕುರಿತು ಮಾರ್ಗಸೂಚಿ ಜಾರಿಮಾಡಲಾಗಿದೆ. ಶಾಲೆಯಲ್ಲಿ ಪ್ರಭಾವಿ ಕಲಿಕೆಗಾಗಿ ಸುರಕ್ಷಿತ ಶೈಕ್ಷಣಿಕ ವಾತಾವರಣವನ್ನು ಬೆಳೆಸಬೇಕಾಗಿದೆ. ಶಾಲೆಗಳು ತನ್ನ ಪರಿಸರದಲ್ಲಿ ಐಟಿ ಉಪಕರಣಗಳ ತಪ್ಪು ಬಳಕೆಯನ್ನು ತಡೆಯುವ ಕ್ರಮವನ್ನು ಕೈಗೊಳ್ಳಬೇಕಾಗಿದೆ ಎಂದು ಸಿಬಿಎಸ್‍ಇ ತಿಳಿಸಿದೆ.

ಶಾಲೆಯ ಎಲ್ಲ ಕಂಪ್ಯೂಟರ್‍ಗಳಿಗೆ ಫಯರ್‍ವಾಲ್, ಫಿಲ್ಟರ್, ನಿಗಾ ಸಾಫ್ಟ್‍ವೇರ್‍ನಂತಹ ಸುರಕ್ಷಾ ಉಪಾಯಗಳನ್ನು ಅಳವಡಿಸಬೇಕಾಗಿದೆ. ಕಂಪ್ಯೂಟರ್‍ನಲ್ಲಿ ಪೆರೆಂಟಲ್ ಕಂಟ್ರೋಲ್ ಫಿಲ್ಟರ್ ಮತ್ತು ಆ್ಯಂಟಿ ವೈರಸ್ ಅಪ್‍ಲೋಡ್ ಮಾಡಬೇಕಾಗಿದೆ. ಪ್ರಿನ್ಸಿಪಾಲ್ ಮತ್ತು ಬಸ್ ಇನ್‍ಚಾರ್ಜ್ ವಹಿಸಿಕೊಂಡವರು ಮಕ್ಕಳಲ್ಲಿ ಇಲೆಕ್ಟ್ರಾನಿಕ್ ಉಪಕರಣಗಳಿವೆಯೇ ಎಂದು ನೋಡಬೇಕು. ಸಂಬಂಧಪಟ್ಟವರು ಈ ಸೂಚನೆಯನ್ನುನಿರಾಕರಿಸಿದರೆ ಸಿಬಿಎಸ್‍ಇ ಕಾನೂನಾತ್ಮಕ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News