ಕೆಪಿಎಸ್ಸಿ ಸದಸ್ಯರ ನೇಮಕ: ರಾಜ್ಯಪಾಲರಿಗೆ ಸ್ಪಷ್ಟಣೆ ನೀಡುತ್ತೇನೆ; ಸಿದ್ದರಾಮಯ್ಯ
Update: 2017-08-21 22:48 IST
ಬೆಂಗಳೂರು, ಆ.21: ರಾಜ್ಯ ಲೋಕಸೇವಾ ಆಯೋಗ(ಕೆಪಿಎಸ್ಸಿ)ಕ್ಕೆ ಸದಸ್ಯರನ್ನು ನೇಮಕ ಮಾಡುವ ಅಧಿಕಾರ ಈಗಲೂ ತಮಗೆ ಇದೆಯೇ ಎಂದು ಸ್ಪಷ್ಟಣೆ ಕೇಳಿ ರಾಜ್ಯಪಾಲರು ಕಡತ ವಾಪಸ್ ಕಳುಹಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಕೆಪಿಎಸ್ಸಿಗೆ ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನು ನನಗೆ ನೀಡಲಾಗಿತ್ತು. ಅದರಂತೆ, ಸದಸ್ಯರ ನೇಮಕದ ಕಡತವನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿತ್ತು ಎಂದರು.
ರಾಜ್ಯಪಾಲರು ಕೆಪಿಎಸ್ಸಿ ಸದಸ್ಯರ ನೇಮಕಾತಿ ಕುರಿತು ಕೇಳಿರುವ ಎಲ್ಲ ಅಂಶಗಳ ಕುರಿತು ಸ್ಪಷ್ಟಣೆ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.