ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾಗಿ ಸುಚೇತನಾ ಸ್ವರೂಪ್ ನೇಮಕ
Update: 2017-08-21 22:57 IST
ಬೆಂಗಳೂರು, ಆ.21: ಮೈಸೂರು ಮೂಲದ ಪತ್ರಕರ್ತ ಸುಚೇತನಾ ಸ್ವರೂಪ್‌ರನ್ನು ರಾಜ್ಯ ಮುಖ್ಯ ಮಾಹಿತಿ ಆಯುಕ್ತರನ್ನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸೋಮವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ಆಯೋಗದ ಆಯುಕ್ತರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸುಚೇತನಾ ಸ್ವರೂಪ್ ಅವರನ್ನು ಮುಖ್ಯ ಮಾಹಿತಿ ಆಯುಕ್ತೆಯನ್ನಾಗಿ ನೇಮಕಗೊಳಿಸಲು ನಿರ್ಧರಿಸಲಾಯಿತು.