ತ್ರಿವಳಿ ತಲಾಕ್ : ಸುಪ್ರೀಂ ಕೋರ್ಟ್ ನ ಬಹುಮತದ ತೀರ್ಪನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡಲು ಕಾರಣವೇನು ?

Update: 2017-08-22 13:37 GMT

ಹೊಸದಿಲ್ಲಿ, ಆ. 22: ತೀವ್ರ ಕುತೂಹಲ ಕೆರಳಿಸಿದ್ದ ತ್ರಿವಳಿ ತಲಾಕ್ ಸಾಂವಿಧಾನಿಕ ಸಿಂಧುತ್ವದ ತೀರ್ಪಿನ ವರದಿ ಮಾಡುವಾಗ  ಮಾಧ್ಯಮಗಳು ಆರಂಭದಲ್ಲಿ ಗೊಂದಲಕ್ಕೆ ಒಳಗಾಗಿದ್ದವು.

ಬಹುಮತದ ತೀರ್ಪು ಹೊರ ಬರುವ ತನಕ ಕಾಯದೆ ಪಂಚ ಸದಸ್ಯರ ನ್ಯಾಯಪೀಠದ  ಹಿರಿಯ ಸದಸ್ಯ ಮುಖ್ಯ ನ್ಯಾಯಮೂರ್ತಿ ಜೆ.ಎಸ್ .ಖೇಹರ್  ನೀಡಿದ ಅಭಿಪ್ರಾಯವನ್ನು ಅಂತಿಮ ತೀರ್ಪು ಎಂದು ಭಾವಿಸಿ ಮಾಧ್ಯಮಗಳು ವರದಿ ಮಾಡಿದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿತ್ತು. ಇದರಿಂದಾಗಿ  ಹೊರಜಗತ್ತಿಗೆ ಆರಂಭದಲ್ಲಿ ಸುಪ್ರೀಂ ಕೋರ್ಟ್ ‘ತ್ರಿವಳಿ ತಲಾಕ್ ನ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್  ಎತ್ತಿ ಹಿಡಿದಿದೆ' ಎಂಬ ಸುದ್ದಿ ರವಾನೆಯಾಗಿತ್ತು.

ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮಹತ್ವದ  ತೀರ್ಪು ಪ್ರಕಟಿಸುವಾಗ ಮೊದಲು ತಮ್ಮ ಅಭಿಪ್ರಾಯ ಹೇಳಿದ್ದರು. ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾ.ಅಬ್ದುಲ್ ನಝೀರ್ ಪಂಚಪೀಠದಲ್ಲಿ ತ್ರಿವಳಿ ತಲಾಕ್  ಪರ ಧ್ವನಿ ಎತ್ತಿದ್ದರು.

 “ಮುಸ್ಲಿಂರಿಗೆ ಇಸ್ಲಾಂ ಧರ್ಮದ ಮೂಲಭೂತ ಹಕ್ಕುಗಳ ಭಾಗವಾಗಿದೆ. ಮತ್ತು ಅದು ಅಸಂವಿಧಾನಿಕವಲ್ಲ’’  ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನ್ಯಾ.ಅಬ್ದುಲ್ ನಝೀರ್ ಅಭಿಪ್ರಾಯಪಟ್ಟಿದ್ದರು.

ಆರು ತಿಂಗಳುಗಳ ಕಾಲ ತ್ರಿಪಲ್ ತಲಾಕ್ ಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಮತ್ತು ಸಂಸತ್ತಿನಲ್ಲಿ ಸೂಕ್ತ ಕಾನೂನು ರಚನೆಗೆ ಕೇಂದ್ರ ಸರಕಾರಕ್ಕೆ ಸಲಹೆ ನೀಡಬೇಕು ಎಂಬ ವಾದವನ್ನು  ತೀರ್ಪು ಓದುವಾಗ ಉಲ್ಲೇಕಿಸಿದ್ದರು. ಆದರೆ ಅದು ಬಹುಮತದ ತೀರ್ಪು ಆಗಿರಲಿಲ್ಲ. ನ್ಯಾಯಪೀಠದ ಇಬ್ಬರು ಸದಸ್ಯರ ಅಭಿಪ್ರಾಯ ಆಗಿತ್ತು. ಇದನ್ನೇ ನಂಬಿ ಮಾಧ್ಯಮಗಳು ಆರಂಭದಲ್ಲಿ ವರದಿ ಮಾಡಿದ್ದವು. ಆದರೆ ಪಂಚ ಪೀಠದ ಉಳಿದ ಮೂವರು ಸದಸ್ಯರಾದ ನ್ಯಾ.ಉದಯ ಲಲಿತ್, ಆರ್.ಎಫ್ .ನಾರಿಮನ್, ಜೋಸೆಫ್ ಕುರಿಯನ್  ಅವರು ನೀಡಿದ  ತೀರ್ಪು ಹೊರಬಂದಾಗ  ಮಾಧ್ಯಮಗಳಿಗೆ ತಮ್ಮ ತಪ್ಪಿನ ಅರಿವಾಗಿತ್ತು.  

“ತ್ರಿಪಲ್ ತಲಾಕ್ ಅಸವಿಂಧಾನಿಕ ಎಂದು ಸದಸ್ಯರಾದ ನ್ಯಾ.ಉದಯ ಲಲಿತ್, ರೋಹಿಂಗ್ಟನ್ ನಾರಿಮನ್ , ಜೋಸೆಫ್ ಕುರಿಯನ್. ತ್ರಿವಳಿ ತಲಾಕ್ ಇಸ್ಲಾಂ ಮತ್ತು ಸಂವಿಧಾನ ಬಾಹಿರ. ಇದಕ್ಕೆ ಸಾಂವಿಧಾನಿಕ ರಕ್ಷಣೆ ನೀಡಲು ಸಾಧ್ಯವಿಲ್ಲ.ಮುಸ್ಲಿಂ ವೈಯಕ್ತಿಕ ಕಾನೂನಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ   ಎಂದು ಅವರು  ತೀರ್ಪು ನೀಡಿದ್ದರು ಹೀಗಾಗಿ  ಬಹುಮತದ (3-2) ಆಧಾರದ ಮೇಲೆ ತ್ರಿವಳಿ ತಲಾಕ್ ಬಗ್ಗೆ ತೀರ್ಪು ಪ್ರಕಟಗೊಂಡಿತು.

 ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ , ನ್ಯಾ. ಕುರಿಯನ್​ ಜೋಸೆಫ್​​ , ನ್ಯಾ. ಆರ್​.ಎಫ್​. ನಾರಿಮನ್​ , ನ್ಯಾ. ಉದಯ್​​ ಉಮೇಶ್  ಲಲಿತ್​​​ , ನ್ಯಾ.ಅಬ್ದುಲ್ ನಝೀರ್  ನೇತೃತ್ವದ ಐವರು ನ್ಯಾಯಮೂರ್ತಿಗಳ ನ್ಯಾಯ ಪೀಠವು ತ್ರಿವಳಿ ತಲಾಕ್ ಗೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ಒಟ್ಟುಗೂಡಿಸಿ ಸತತ ಆರು ದಿನಗಳ ಕಾಲ ವಿಚಾರಣೆ ನಡೆಸಿ ಮೇ 18ರಂದು ತೀರ್ಪು  ಕಾಯ್ದಿರಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News