ಎಂ. ಆತ್ಮೀಯ

Update: 2017-08-22 18:34 GMT

ಚಾಮರಾಜನಗರ, ಆ.22: ಟಿ.ವಿ.9 ಜಿಲ್ಲಾ ವರದಿಗಾರ ಎಂ.ಇ. ಮಂಜುನಾಥ್ ಅವರ ಹಿರಿಯ ಪುತ್ರ ಎಂ. ಆತ್ಮೀಯ (5) ಮಂಗಳವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನವಾಗಿದೆ.

ನಗರದ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಎಲ್‌ಕೆಜಿ ತರಗತಿಯಲ್ಲಿ ಓದುತ್ತಿದ್ದ ಮಗು ಸೋಮವಾರ ಹೃದಯ ಸಂಬಂಧಿ ಅನಾರೋಗ್ಯ ತಲೆದೋರಿತು. ಚಿಕಿತ್ಸೆಗಾಗಿ ಮೈಸೂರಿನ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದೆ.

ಮಗು ತಂದೆ, ತಾಯಿ, ತಮ್ಮನನ್ನು ಅಗಲಿದೆ.

 ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎಂ. ನಂದೀಶ್, ಉಪಾಧ್ಯಕ್ಷ ಸಿದ್ಧಲಿಂಗಸ್ವಾಮಿ, ಪ್ರ. ಕಾರ್ಯದರ್ಶಿ ದೇವರಾಜು ಕಪ್ಪಸೋಗೆ ಮತ್ತು ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ