×
Ad

ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಪ್ರಕಾಶ್ ಜಾವ್ಡೇಕರ್ ನೇಮಕ

Update: 2017-08-24 17:57 IST

ಬೆಂಗಳೂರು, ಆ.24: ರಾಜ್ಯ ಬಿಜೆಪಿಯ ನೂತನ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್‌ರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗುರುವಾರ ನೇಮಕ ಮಾಡಿದ್ದಾರೆ.

ಆಂಧ್ರಪ್ರದೇಶದ ಮುರಳೀಧರ ರಾವ್‌  ರಾಜ್ಯ ಉಸ್ತುವಾರಿಯಾಗಿ ಮುಂದುವರಿಸಲಾಗಿದೆ. ಬಿ.ಎಸ್. ಯಡಿಯೂರಪ್ಪರೊಂದಿಗೆ ಮುನಿಸಿಕೊಂಡಿದ್ದ ಆರೆಸ್ಸೆಸ್ ಮುಖಂಡ ಬಿ.ಎಲ್. ಸಂತೋಷ್ ಮತ್ತೆ ಸಕ್ರಿಯರಾಗಿದ್ದು, ಬಿಜೆಪಿಯ ಮಂಗಳೂರು ಚಲೋ ರ್ಯಾಲಿಯ ನೇತೃತ್ವದ ಜವಾಬ್ದಾರಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News