×
Ad

ಆ.26ರಿಂದ ಆಫ್‌ಲೈನ್ ಸೀಟು ಹಂಚಿಕೆ ಕೌನ್ಸಲಿಂಗ್

Update: 2017-08-24 18:21 IST

ಬೆಂಗಳೂರು, ಆ.24: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಎರಡನೆ ಸುತ್ತಿನ ಸೀಟು ಹಂಚಿಕೆ ಬಳಿಕ ಉಳಿದಿರುವ ಸೀಟುಗಳಿಗೆ ಆ.26ರಿಂದ 28ರವರೆಗೆ ಆಫ್‌ಲೈನ್ ಕೌನ್ಸಲಿಂಗ್ ನಡೆಸಲಾಗುತ್ತದೆ. ಆ.25ರೊಳಗೆ ರದ್ದಾಗುವ ಇತರೆ ಸೀಟುಗಳನ್ನೂ ಈ ಸುತ್ತಿಗೆ ಸೇರ್ಪಡೆ ಮಾಡಲಾಗುತ್ತದೆ.

ಈಗಾಗಲೇ ವೈದ್ಯಕೀಯ ಸೀಟು ಪಡೆದ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲ. ಆದರೆ, ಪ್ರಾಧಿಕಾರದ ಮೂಲಕ ದಂತ ವೈದ್ಯಕೀಯ ಸೀಟು ಪಡೆದವರು ವೈದ್ಯಕೀಯ ಸೀಟಿಗಾಗಿ ಈ ಸುತ್ತಿನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News