×
Ad

ಆ.27ರಂದು ಆಲ್ಕೋಹಾಲಿಕ್ಸ್ ಅನಾನಿಮಸ್ ಸಂಸ್ಥೆಯ ವಾರ್ಷಿಕೋತ್ಸವ

Update: 2017-08-24 20:26 IST

ಬೆಂಗಳೂರು, ಆ.24: ಆಲ್ಕೋಹಾಲಿಕ್ಸ್ ಅನಾನಿಮಸ್ ಸಂಸ್ಥೆಯ 53ನೇ ವಾರ್ಷಿಕೋತ್ಸವನ್ನು ಆ.27ರಂದು ನಗರದ ಸೇಂಟ್ ಜೋಸೆಫ್ ಬಾಯ್ಸೆ ಹೈ ಸ್ಕೂಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿವೃತ್ತ ಡಿಜಿ ಮತ್ತು ಐಜಿಪಿ ಡಾ.ಎಸ್.ಟಿ.ರಮೇಶ್, ಕಾರ್ಯಕ್ರಮವನ್ನು ಬಿಷಪ್ ಡಾ.ಬರ್ನಾಡ್ ಮೋರಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಲ್ಲದೆ, ಐದು ಸಾವಿರಕ್ಕೂ ಅಧಿಕ ಜನರು ಮದ್ಯದಿಂದ ಬಿಡುಗಡೆಯಾದವರು ಭಾಗವಹಿಸಲಿದ್ದು, ಹಲವರು ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದರು.

ಯಾವುದೇ ಲಿಂಗ, ಮತ ಧರ್ಮದ ಭೇದವಿಲ್ಲದೆ ಆಲ್ಕೋಹಾಲಿಕ್ಸ್ ಅನಾನಿಮಸ್‌ನಿಂದ ಬಿಡುಗಡೆ ಹೊಂದಲು ಯಾವುದೇ ಚಿಕಿತ್ಸೆಯಾಗಲಿ, ಔಷಧಿಯಾಗಲಿ ನೀಡುವುದಿಲ್ಲ. ಪರಸ್ಪರ ಸಮಾಲೋಚನೆ ನಡೆಸಲಾಗುವುದು. ಇದಕ್ಕಾಗಿ ಯಾವುದೇ ರೀತಿಯ ಹಣ ಪಡೆಯುವುದಿಲ್ಲ. ಮದ್ಯಪಾನ ಅಭ್ಯಾಸದಿಂದ ಹೊರಬರಲು ಇದೊಂದು ಸಾಧನವಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ವತಿಯಿಂದ ಶಾಲಾ ಕಾಲೇಜು, ಕೊಳಗೇರಿಗಳಲ್ಲಿ ಜಾಗತಿ ಮೂಡಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 9845587507 ಸಂಪರ್ಕಿಸಬಹುದಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News