×
Ad

ಆ.26 ರಂದು ದುಂಡು ಮೇಜಿನ ಚರ್ಚೆ

Update: 2017-08-24 20:32 IST

ಬೆಂಗಳೂರು, ಆ. 24: ಆಮ್ ಆದ್ಮಿ ಪಕ್ಷದಿಂದ ‘ಜನರಿಂದ ಸರಕಾರ’ ಎಂಬ ದುಂಡು ಮೇಜಿನ ಚರ್ಚೆ ಕಾರ್ಯಕ್ರಮವನ್ನು ಆ.26 ರಂದು ನಗರದ ಗಾಂಧಿ ಭವನದಲ್ಲಿ ಏರ್ಪಡಿಸಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಸಹ ಸಂಚಾಲಕಿ ಶಾಂತಾ ದಾಮ್ಲೆ, ಕಾರ್ಯಕ್ರಮವನ್ನು ದಿಲ್ಲಿ ಸರಕಾರದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಚಾಲನೆ ನೀಡಲಿದ್ದು, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಎಎಪಿ ಸಂಚಾಲಕ ಪೃಥ್ವಿರೆಡ್ಡಿ ಸೇರಿದಂತೆ ವಿವಿಧ ವಿಭಾಗಗಳ ಹಾಗೂ ಸಂಘಟನೆಗಳ ಮುಖಂಡರು ಭಾಗವಹಿಸುತ್ತಾರೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜನರಿಂದ ಆಯ್ಕೆಯಾದ ಸರಕಾರಗಳು ಯಾವ ರೀತಿ ಕೆಲಸ ಮಾಡುತ್ತಿವೆ. ಯಾರ ಪರವಾದ ಯೋಜನೆ, ಕಾನೂನುಗಳು ಜಾರಿ ಮಾಡಲಾಗುತ್ತಿದೆ ಎಂಬ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಅಲ್ಲದೆ, ದಿಲ್ಲಿ ಸರಕಾರ ಮಾದರಿ ಕುರಿತು ವಿವರಣೆ ನೀಡಲಾಗುತ್ತದೆ. ಇದೇ ವೇಳೆ ಆಪ್ ನಾಗರಿಕ ಸಬಲೀಕರಣ ವೆಬ್‌ಸೈಟ್ ಬಿಡುಗಡೆ ಮಾಡಲಾಗುತ್ತದೆ ಎಂದು ಶಾಂತಾ ದಾಮ್ಲೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News