×
Ad

ವಿದ್ಯಾರ್ಥಿಗಳಿಗಾಗಿ ಸೆ.1ರಿಂದ ಕಾವ್ಯ ಕಮ್ಮಟ

Update: 2017-08-26 18:09 IST

ಬೆಂಗಳೂರು, ಆ. 26: ಕನ್ನಡ ಕಾವ್ಯದ ಓದು, ಗ್ರಹಿಕೆ, ಬರಹದ ಕುರಿತು ಕಾಲೇಜಿನ ವಿದ್ಯಾರ್ಥಿಗಳಿಗೆ, ಯುವ ಬರಹಗಾರರಿಗೆ ಕನ್ನಡ ಕಾವ್ಯ ಕಮ್ಮಟವನ್ನು ಬುದ್ಧ ಬಸವ ಗಾಂಧಿ ಟ್ರಸ್ಟ್ ವತಿಯಿಂದ ಸೆ.1ರಿಂದ ಮೂರು ದಿನಗಳ ಕಾಲ ಏರ್ಪಡಿಸಲಾಗಿದೆ.

ಟ್ರಸ್ಟ್‌ನಿಂದ 19 ವರ್ಷಗಳಿಂದ ವಿದ್ಯಾಥಿಗಳಿಗೆ ಹಾಗೂ ಯುವ ಬರಹಗಾರರಿಗೆ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯ ಕುರಿತು ಅರಿವು ಮೂಡಿಸುತ್ತ ಬರುತ್ತಿದೆ. ಈ ಹಿನ್ನಲೆಯಲ್ಲಿ ಕಾವ್ಯದ ಓದು ಗ್ರಹಿಕೆ ಬರಹದ ಕುರಿತು ಕನ್ನಡ ಕಾವ್ಯ ಕಮ್ಮಟವನ್ನು ನಗರದ ಕೆಂಗೇರಿ ಉಪನಗರ ಶೇಷಾದ್ರಿಪುರಂ ಕಾಲೇಜ್‌ನಲ್ಲಿ ಸೆ.1ರಿಂದ ಮೂರು ದಿನಗಳ ಕಾಲ ನಡೆಯಲಿದೆ.

ಕಮ್ಮಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಸ್.ಮನು ಬಳಿಗಾರ್, ಲೇಖಕ ಜರಗನಹಳ್ಳಿ ಶಿವಶಂಕರ್, ಸಾಹಿತಿ ಡಾ.ಎಚ್.ಎಸ್.ವೆಂಕಟೇಶ್‌ಮೂರ್ತಿ, ಉಪನ್ಯಾಸಕಿ ಪ್ರೊ.ತಾರಿಣಿ ಶುಭದಾಯಿನಿ, ಎ.ಆರ್.ರಘುರಾಮ್ ಸೇರಿದಂತೆ ಇನ್ನಿತರ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳಲಿದ್ದು, ಶಿಭಿರಾರ್ಥಿಗಳಿಗೆ ಉಪನ್ಯಾಸ, ಸಂವಾದ ನಡೆಸಲಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೋಂದಾಯಿಸಲು ಸಂಪರ್ಕಿಸಲು , ದೂರವಾಣಿ ಸಂಖ್ಯೆ: ಸಿಸಿರಾ 944888985, ಡಾ. ವನಜಾಕ್ಷಿ 9980271367 ಪ್ರೊ.ಜಯರಾಮ್ 9341325535 ಸಂಪರ್ಕಿಸಬಹುದು ಎಂದು ಟ್ರಸ್ಟ್ ಅಧ್ಯಕ್ಷ ಸಿಸಿರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News