ಶೇಷಾದ್ರಿಪುರಂ: ಅಪರಿಚಿತ ಮಹಿಳೆ ಶವ ಪತ್ತೆ
Update: 2017-08-26 20:19 IST
ಬೆಂಗಳೂರು, ಆ.26: ಶೇಷಾದ್ರಿಪುರಂನ ಮೋರಿಯೊಳಗೆ ಶುಕ್ರವಾರ ಸಂಜೆ ಅಪರಿಚಿತ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾಗಿದೆ.
ಮೃತ ಮಹಿಳೆಗೆ ಸುಮಾರು 40ರಿಂದ 45 ವರ್ಷ ವಯಸ್ಸಾಗಿದ್ದು, ಶುಕ್ರವಾರ ಸಂಜೆ ಶೇಷಾದ್ರಿಪುರಂನ ಒಂದನೆ ಮುಖ್ಯರಸ್ತೆಯ ಮೋರಿಯಲ್ಲಿ ಈ ಅಪರಿಚಿತ ಮಹಿಳೆಯ ಶವ ಕಂಡ ಸಾರ್ವಜನಿಕರು ಶೇಷಾದ್ರಿಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಮೋರಿಯಲ್ಲಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಶೇಷಾದ್ರಿಪುರಂ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.