×
Ad

ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿ ಎಸ್.ಪಿ. ಶೇಷಾದ್ರಿ

Update: 2017-08-28 18:19 IST

ಬೆಂಗಳೂರು, ಆ.28: ಸಹಕಾರಿ ಧುರೀಣ, ಶಿಕ್ಷಣ, ಪತ್ರಿಕೋದ್ಯಮ ಕ್ಷೇತ್ರದಲ್ಲಿ 30 ವರ್ಷಗಳಿಂದ ತೊಡಗಿಸಿಕೊಂಡಿರುವ ಎಸ್.ಪಿ. ಶೇಷಾದ್ರಿ ಅವರನ್ನು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅಧಿಕಾರ ಹಸ್ತಾಂತರಿಸಿದರು. ಮೂಲತ ಶಿವಮೊಗ್ಗದವರಾದ ಶೇಷಾದ್ರಿ 30 ವರ್ಷಗಳಿಂದ ಪತ್ರಿಕೋದ್ಯಮ ರಂಗದಲ್ಲಿದ್ದಾರೆ. ಎರಡು ಬಾರಿ ರಾಜ್ಯ ಮಟ್ಟದ ಸಹಕಾರ ಪ್ರಶಸ್ತಿ ಪಡೆದಿರುವ ಅವರು, ವಿವಿಧ ದೇವಸ್ಥಾನಗಳಲ್ಲಿ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News