ಬಿಎಸ್‌ವೈ ‘ದಲಿತರ ಆಹ್ವಾನ’ ರಾಜಕೀಯ ಗಿಮಿಕ್: ಸಿಎಂ ಸಿದ್ದರಾಮಯ್ಯ
Update: 2017-08-28 18:27 IST
ಬೆಂಗಳೂರು, ಆ. 28: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದಲಿತರನ್ನು ಊಟಕ್ಕೆ ಆಹ್ವಾನಿಸಿರುವುದು ಕೇವಲ ರಾಜಕೀಯ ಗಿಮಿಕ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಟೀಕೆ ಮಾಡಿದ್ದಾರೆ.
ಸೋಮವಾರ ನಗರದ ಗಾಂಧಿ ಭವನದ ಬಾಪೂಜಿ ಸಭಾಂಗಣದಲ್ಲಿ ಸವಿರಾಜ್ ಸಿನೆಮಾಸ್ ಹಮ್ಮಿಕೊಂಡಿದ್ದ ‘ಹೆಬ್ಬೆಟ್ ರಾಮಕ್ಕ’ ಚಲನಚಿತ್ರದ ಮೂಹರ್ತ ಸಮಾರಂಭದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಯಡಿಯೂರಪ್ಪ ದಲಿತರನ್ನು ಮನೆಗೆ ಆಹ್ವಾನಿಸಿ ಅವರನ್ನು ಸತ್ಕರಿಸಿ, ಭೋಜನಾ ಕೂಟ ಏರ್ಪಡಿಸಿರುವ ರಾಜಕೀಯ ಗಿಮಿಕ್ ಅಷ್ಟೇ. ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇದೆಲ್ಲಾ ಮಾಡುತ್ತಿದ್ದು, ಈ ಹಿಂದೆ ಏಕೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.