×
Ad

ಪಿಎಸ್ಸೈ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಂಧನ

Update: 2017-08-29 20:56 IST

ಬೆಂಗಳೂರು, ಆ.29: ನಗರದ ಡಿಜೆಹಳ್ಳಿ ಠಾಣೆಯ ಪಿಎಸ್ಸೈ ನಯಾಝ್ ಅಹ್ಮದ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ರೌಡಿ ನದೀಮ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಪಿಎಸ್ಸೈ ಮೇಲೆ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ಆರೋಪಿ ರೌಡಿ ನದೀಮ್ ಖಾಸಗಿ ವಾಹಿನಿಯೊಂದರ ಕಚೇರಿಯ ಎದುರು ಸೋಮವಾರ ಮಧ್ಯರಾತ್ರಿ 2ರ ಸುಮಾರಿಗೆ ತಾಯಿಯೊಂದಿಗೆ ಬಂದಿದ್ದ. ಬ್ಲೇಡ್‌ನಿಂದ ಕತ್ತಿನ ಚರ್ಮವನ್ನು ಕೊಯ್ದುಕೊಂಡು ರಂಪಾಟ ಮಾಡಿದ್ದಾನೆ.

ಪಿಎಸ್ಸೈ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ರೌಡಿ ನದೀಮ್‌ ಖಾಸಗಿವಾಹಿನಿಯೊಂದರ ಕಚೇರಿಯ ಎದುರು ಸೋಮವಾರ ರಾತ್ರಿ 2ರ ಸುಮಾರಿಗೆ ತಾಯಿಯೊಂದಿಗೆ ಬಂದಿದ್ದ. ಬ್ಲೇಡ್‌ನಿಂದ ಕತ್ತಿನ ಚರ್ಮವನ್ನು ಕೊಯ್ದುಕೊಂಡು ರಂಪಾಟ ಮಾಡಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ನದೀಮ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.

ಪಿಎಸ್ಸೈ ನಯಾಝ್ ಅಹ್ಮದ್ ಮೇಲೆ ಹಲ್ಲೆ ನಡೆಸಿದ ಕೃತ್ಯದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಮೂವರಿಗಾಗಿ ಪತ್ತೆಕಾರ್ಯ ಮುಂದುವರೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News