ನಕಲಿ ಜಾತಿ ಪ್ರಮಾಣ ಪತ್ರ ಆರೋಪ: ಕೆಂಪಯ್ಯಗೆ ಕ್ಲೀನ್ ಚಿಟ್
ಬೆಂಗಳೂರು, ಆ.29: ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಆರೋಪ ಹೊತ್ತಿದ್ದ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಕ್ಲೀನ್ ಚಿಟ್ ನೀಡಿದೆ.
ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಅವರು ಐಪಿಎಸ್ ಅಧಿಕಾರಿ ಹುದ್ದೆಗೆ ಆಯ್ಕೆಯಾಗುವ ಸಂದರ್ಭ ಕಾಡು ಕುರುಬ ಜಾತಿಗೆ ಸೇರಿದ್ದೇನೆ ಎಂದು ಜಾತಿ ಪ್ರಮಾಣ ಪತ್ರ ನೀಡಿದ್ದರು. ಅದೇ, ಆಧಾರದ ಮೇಲೆ ಐಪಿಎಸ್ ಹುದ್ದೆ ಪಡೆದಿದ್ದರು. ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಅವರು ಐಪಿಎಸ್ ಅಧಿಕಾರಿ ಹುದ್ದೆಗೆ ಆಯ್ಕೆಯಾಗುವ ಸಂದರ್ಭ ಕಾಡು ಕುರುಬ ಜಾತಿಗೆ ಸೇರಿದ್ದೇನೆ ಎಂದು ಜಾತಿ ಪ್ರಮಾಣ ಪತ್ರ ನೀಡಿದ್ದರು. ಅದೇ,ಆಧಾರದ ಮೇಲೆ ಐಪಿಎಸ್ ಹುದ್ದೆ ಪಡೆದಿದ್ದರು. ಇದೀಗ ಆ ಹುದ್ದೆಯಲ್ಲಿ ಮುಂದುವರಿದು ನಿವೃತ್ತಿಯಾಗಿದ್ದಾರೆ.
ಕಾಡು ಕುರುಬ ಜಾತಿ ಪ್ರಮಾಣಪತ್ರ ನೀಡಿ ಪರಿಶಿಷ್ಟ ವರ್ಗ ಕೋಟಾದಡಿ ಐಪಿಎಸ್ ಹುದ್ದೆ ಪಡೆದಿದ್ದರು. ಆದರೆ, ಇದು ದಾಖಲೆಯೇ ನಕಲಿ ಎಂದು ಆರ್‌ಟಿಐ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಎಂಬುವರು ಎಸಿಬಿಗೆ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಎಸಿಬಿ, ಕೆಂಪಯ್ಯ ನೀಡಿದ ಜಾತಿ ಪ್ರಮಾಣಪತ್ರ ಸಕ್ರಮವಾಗಿದೆ. ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಆದರೆ,ಇದರ ವಿಚಾರಣೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಕ್ಲೀನ್ ಚಿಟ್ ನೀಡಿದೆ.