×
Ad

ಐಟಿ ಉದ್ಯೋಗಿ ಆತ್ಮಹತ್ಯೆ

Update: 2017-08-30 18:50 IST

ಬೆಂಗಳೂರು, ಆ.30: ಆದಾಯ ತೆರಿಗೆ ಇಲಾಖೆಯ(ಐಟಿ) ಉದ್ಯೋಗಿಯೊಬ್ಬರು ಕಾರ್ಪೊರೇಶನ್ ಬಳಿಯಿರುವ ಯುನಿಟಿ ಬಿಲ್ಡಿಂಗ್‌ನ 5ನೆ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.

ನಗರದ ನಿವಾಸಿ ಜಯರಾಮ್(53) ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ ಎಂದು ತಿಳಿದು ಬಂದಿದೆ.

ಯುನಿಟಿ ಬಿಲ್ಡಿಂಗ್ ಪಕ್ಕದ ಅನೆಕ್ಸ್ ಕಾಂಪ್ಲೆಕ್ಸ್ ನಲ್ಲಿ ಆದಾಯ ತೆರಿಗೆ ಕಚೇರಿಯಿದ್ದು, ಇಲ್ಲಿ ಡಿ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು. ಎಂದಿನಂತೆ ಜಯರಾಮ್ ಅವರು ಬುಧವಾರ ಬೆಳಗ್ಗೆ  ಕಚೇರಿಗೆ ಬಂದಿದ್ದಾರೆ. ಆದರೆ, ಮಧ್ಯಾಹ್ನ 12:30ರ ಸಂದರ್ಭದಲ್ಲಿ 5ನೆ ಮಹಡಿಗೆ ತೆರಳಿದ ಜಯರಾಮ್ ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಲಭಿಸಿವೆ.

ಈ ಘಟನೆಗೆ ಕಾರಣ ತಿಳಿದು ಬಂದಿಲ್ಲ ಎಂದು ಹಲಸೂರು ಗೇಟ್ ಠಾಣಾ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News