×
Ad

ಯಡಿಯೂರಪ್ಪ ವಂಶಸ್ಥರು ಹಿಂದೊಮ್ಮೆ ದಲಿತರೇ ಆಗಿದ್ದರು: ನಿಜಗುಣಾನಂದ ಸ್ವಾಮೀಜಿ

Update: 2017-08-30 20:32 IST

ಬೆಂಗಳೂರು, ಆ.30: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದಲಿತ ಕುಟುಂಬಗಳನ್ನು ತಮ್ಮ ಮನೆಗೆ ಕರೆದು ಊಟು ಹಾಕಿರುವುದರಲ್ಲಿ ಯಾವುದೇ ಹೆಚ್ಚುಗಾರಿಕೆ ಇಲ್ಲ. ತಮ್ಮ ಸಮುದಾಯವು ಹಿಂದೊಮ್ಮೆ ದಲಿತರೇ ಆಗಿದ್ದರು ಎಂಬುದನ್ನು ಮರೆಯಬಾರದು ಎಂದು ಬೇಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ತಿಳಿಸಿದರು.

ಬುಧವಾರ ಜನ ಸಾಮಾನ್ಯರ ವೇದಿಕೆ ನಗರದ ಬಸವ ಭವನದಲ್ಲಿ ಲಿಂಗಾಯತ ಧರ್ಮ-ಸ್ವತಂತ್ರ ಧರ್ಮ ನಿರ್ಣಾಯಕ ಸಭೆಯಲ್ಲಿ ಮಾತನಾಡಿದ ಅವರು, ದಲಿತರಿಗೆ ಊಟ ಹಾಕಿದ ಮಾತ್ರಕ್ಕೆ ಅಸ್ಪಶ್ಯತೆ ತೊಲಗುತ್ತದೆ ಎಂಬುದು ಭ್ರಮೆ ಮಾತ್ರವಷ್ಟೆ ಎಂದರು.

ದಲಿತ ಹಾಗೂ ಹಿಂದುಳಿದ ವರ್ಗಗಳ ಕಾಯಕ ಜೀವನವೇ ಲಿಂಗಾಯತ ಧರ್ಮದ ಮೂಲ ಸಾರವಾಗಿದೆ. ಇದನ್ನು ಅರಿಯದ ಕೆಲವು ಲಿಂಗಾಯತ ಮುಖಂಡರು ದಲಿತರಿಗೆ ಮನೆಗೆ ಕರೆದು ಊಟ ಹಾಕಿದ್ದನ್ನೇ ಹೆಚ್ಚುಗಾರಿಕೆಯೆಂದು ಹೇಳಿಕೊಳ್ಳುತ್ತಾರೆ. ಹೀಗೆ ಭಾವಿಸುವುದು ಶಿವಶರಣರಿಗೆ ನಾವು ಮಾಡುವ ಅಪಮಾನವೆಂದು ಅವರು ಹೇಳಿದರು.

ವೈದಿಕ ಧರ್ಮವು ತಮ್ಮ ಸ್ವಾರ್ಥಕ್ಕಾಗಿ ಕಾಯಕ ಜೀವಿಗಳನ್ನು ಎಲ್ಲರಿಂದಲೂ ವಂಚಿತರನ್ನಾಗಿ, ಶೋಷಣೆ ಮಾಡಿದ್ದರು. ಇದನ್ನು ಕಂಡ ಬಸವಣ್ಣ ಕಾಯಕ ಸಮುದಾಯಗಳನ್ನು ಸಂಘಟಿಸಿ ಕಾಯಕವೇ ನಿಜವಾದ ಧರ್ಮ. ಕಾಯಕವೇ ಶಿವ ಎನ್ನುವ ತತ್ವಗಳನ್ನು ಬೋಧಿಸಿ ಶ್ರಮ ಜೀವಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದ್ದರು. ಅಂತಹ ಸಮುದಾಯ ವಾತಾವರಣದಲ್ಲಿ ಬೆಳೆದವರು ದಲಿತರಿಗೆ ಮನೆಗೆ ಕರೆದು ಊಟ ಹಾಕಿದೆ ಎನ್ನುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News