ಶಿರಿಯಾರ ಗ್ರಾ.ಪಂ.ಗೆ ಸೆ.24ಕ್ಕೆ ಉಪ ಚುನಾವಣೆ
ಬೆಂಗಳೂರು, ಸೆ. 2: ಉಡುಪಿ ಜಿಲ್ಲೆ, ಅದೇ ತಾಲೂಕಿನ ವಿಸರ್ಜಿತ ಶಿರಿಯಾರ ಗ್ರಾಮ ಪಂಚಾಯಿತಿಗೆ ಸೆ.24ರಂದು ಉಪ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ ಘೋಷಿಸಿದೆ.
ಸೆ.11ಕ್ಕೆ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಸೆ.14 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಸೆ.15ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಸೆ.18 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ.
ಸೆ.24ರ ಬೆಳಗ್ಗೆ 7ರಿಂದ 5ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಸೆ.27ರಂದು ಮತ ಎಣಿಕೆ ಕಾರ್ಯ ಉಡುಪಿ ತಾಲೂಕಿನಲ್ಲಿ ನಡೆಯಲಿದೆ. ಅಧಿಸೂಚನೆ ಹೊರಬಿದ್ದ ಬಳಿಕ ಶಿರಿಯಾರ ಗಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೆ.11ರಿಂದ ಸೆ.27ರ ವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ.
ಮೇಲ್ಕಂಡ ಗ್ರಾಮ ಪಂಚಾಯಿತಿ ಚುನಾವಣೆಗೆ ಹೈದರಾಬಾದ್‌ನ ಇಸಿಐಎಲ್ ತಯಾರಿಸಿರುವ ಮಲ್ಟಿಚಾಯ್ಸಿ ವಿದ್ಯುನ್ಮಾನ ಮತ ಯಂತ್ರದ ಮೂಲಕ ಚುನಾವಣೆ ನಡೆಸಲು ಹಾಗೂ ಪ್ರಥಮ ಬಾರಿಗೆ ವೆೆುಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿ. ವೆೆುಸೂರು ಇವರು ತಯಾರಿಸಿರುವ ‘ಇಂಡೆಲಬಲ್ ಮಾರ್ಕಲ್ ಪೆನ್’ನಲ್ಲಿ ಮತದಾರರ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲು ಆದೇಶಿಸಲಾಗಿದೆ.