ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ನಾಲ್ವರ ಬಂಧನ, ನಗದು, ಮೊಬೈಲ್ ವಶ

Update: 2017-09-02 13:54 GMT

ಬೆಂಗಳೂರು, ಆ.2: ಮಸಾಜ್ ಪಾರ್ಲರ್‌ವೊಂದರಲ್ಲಿ ಸ್ವೈಪಿಂಗ್ ಮೆಷಿನ್ ಇಟ್ಟುಕೊಂಡು ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆಯ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ನಾಲ್ವರನ್ನು ಬಂಧಿಸಿ, 22,860 ರೂ.ನಗದು, ನಾಲ್ಕು ಮೊಬೈಲ್‌ಗಳನ್ನು ವಶಪಡಿಸಿಕೊಂಡಿರುವ ಘಟನೆ ಇಂದಿರಾನಗರದಲ್ಲಿ ನಡೆದಿದೆ. ಬಂಧಿತರನ್ನು ಎಚ್‌ಎಎಲ್ 3ನೆ ಹಂತದ ನಿವಾಸಿ ಚಂದ್ರ ಪ್ರಕಾಶ್(42), ಕೆ.ಜಿ.ಹಳ್ಳಿ ಕುಶಾಲನಗರ ನಿವಾಸಿ ಫಯಾಝ್(38), ಬಯಪ್ಪನಹಳ್ಳಿ ಬಡಾವಣೆಯ ವಿನ್‌ಸೆಂಟ್ ಮೋರೆಸ್(30), ಕೆ.ಆರ್.ಪುರಂನ ವಿಕ್ಟರ್(28) ಎಂದು ಗುರುತಿಸಲಾಗಿದೆ.

  ಆರೋಪಿಗಳು ಇಂದಿರಾನಗರದ 80 ಅಡಿ ರಸ್ತೆಯ ಔರಾ ಸ್ಪಾ ಅಂಡ್ ಸಲೂನ್ ಎಂಬ ಮಸಾಜ್ ಪಾರ್ಲರ್‌ನಲ್ಲಿ ಬಾಡಿ ಟು ಬಾಡಿ ಮಸಾಜ್, ಹ್ಯಾಪಿ ಎಂಡಿಂಗ್, ಸ್ಯಾಂಡ್ ವಿಚ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಬಂಧಿತರಿಂದ 4 ಮೊಬೈಲ್‌ಗಳು, 22,860 ರೂ. ನಗದು ಒಂದು ಸ್ವೈಪಿಂಗ್ ಮೆಷಿನ್ ಅನ್ನು ವಶಪಡಿಸಿಕೊಂಡಿದ್ದಾರೆ.

 ಈ ಮೊಕದ್ದಮೆ ದಾಖಲಿಸಿಕೊಂಡಿರುವ ಇಂದಿರಾನಗರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News