ಆಟೊಗೆ ಬಸ್ ಢಿಕ್ಕಿ: ಇಬ್ಬರು ಮೃತ್ಯು
Update: 2017-09-03 18:45 IST
ಬೆಂಗಳೂರು, ಸೆ.3: ಕೆಎಸ್ಸಾರ್ಟಿಸಿ ಬಸ್ ಲಗೇಜ್ ಆಟೊಗೆ ಢಿಕ್ಕಿ ಹೊಡೆದ ಪರಿಣಾಮ ಆಟೊದಲ್ಲಿದ್ದ ತರಕಾರಿ ವ್ಯಾಪರಿಗಳಿಬ್ಬರು ಮೃತಪಟ್ಟಿರುವ ಘಟನೆ ರವಿವಾರ ಬೆಳಗ್ಗೆ ಮಾಗಡಿಯ ಜ್ಯೋತಿ ಪಾಳ್ಯದ ಬಳಿ ನಡೆದಿದೆ.
ಮೃತರನ್ನು ನಾಗರಬಾವಿಯ ತರಕಾರಿ ವ್ಯಾಪಾರಿಗಳಾದ ರಘು(21)ಹಾಗೂ ಪರಮೇಶ್(51) ಎಂದು ಗುರುತಿಸಲಾಗಿದೆ.
ಮಾಗಡಿಯಿಂದ ತರಕಾರಿ ತೆಗೆದುಕೊಂಡು ಲಗೇಜ್ ಆಟೊದಲ್ಲಿ ತುಂಬಿಸಿಕೊಂಡು ಆದಿತ್ಯವಾರ ಬೆಳಗ್ಗೆ 6ರ ವೇಳೆ ನಗರದ ಕಡೆಗೆ ಬರುತ್ತಿದ್ದಾಗ ಮಾರ್ಗ ಮಧ್ಯೆ ಮಾಗಡಿಯ ಜ್ಯೋತಿ ಪಾಳ್ಯದ ಬಳಿ ಮಾಗಡಿ ಕಡೆಗೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಆಟೊಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಆಟೊ ಜಖಂಗೊಂಡು ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.
ಬಸ್‌ನಲ್ಲಿದ್ದ ನಾಲ್ಕೈದು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಮಾಗಡಿ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿ ಬಸ್ ಚಾಲಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.