×
Ad

ರಾಜ್ಯದ 230 ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ: ಸಚಿವ ಪ್ರಿಯಾಂಕ್‌ಖರ್ಗೆ.

Update: 2017-09-03 19:51 IST

ಬೆಂಗಳೂರು, ಸೆ.3: ರಾಜ್ಯದ 230 ಸರಕಾರಿ ಶಾಲೆಗಳನ್ನು ಗುರುತಿಸಿ 45 ಸಾವಿರ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರದ ಸಂಪೂರ್ಣ ಸೆಟ್ ನೀಡಲು ರಾಜಸ್ಥಾನ್ ಕಾಸ್ಮೊ ಫೌಂಡೇಶನ್ ಟ್ರಸ್ಟ್ ಮುಂದಾಗಿರುವುದು ಶ್ಲಾಘನೀಯ ಎಂದು ಮಾಹಿತಿ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರವಿವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ರಾಜಸ್ಥಾನ್ ಕಾಸ್ಮೊ ಫೌಂಡೇಶನ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ‘ಉಮ್ಮೀದ್ ರನ್ 10ಕೆ ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮವಸ್ತ್ರ ವಿದ್ಯಾರ್ಥಿಗಳಲ್ಲಿ ಹೊಸತೊಂದು ಆಶಾಕಿರಣವನ್ನು ಉಂಟು ಮಾಡುತ್ತದೆ. ಹಲವಾರು ಶಾಲೆಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಇಲ್ಲದೆ ತೊಂದರೆ ಗೀಡಾಗುವ ಉದಾಹರಣೆಗಳು ಇವೆ. ರಾಜ್ಯ ಸರಕಾರವು ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿವೆ ಎಂದು ಹೇಳಿದರು.

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಮೊಗದಲ್ಲಿ ಉಮ್ಮೀದ್‌ ರನ್ ಹೊಸ ಮಂದಹಾಸವನ್ನು ಮೂಡಿಸಲಿದೆ. ರಾಜಸ್ಥಾನ್ ಕಾಸ್ಮೊ ಫೌಂಡೇಶನ್ ಟ್ರಸ್ಟ್‌ನ ಈ ಪ್ರಯತ್ನವು ನಿಜಕ್ಕೂ ಅಭಿನಂದನಾರ್ಹ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.


ಉಮ್ಮೀದ್ ರನ್ 10ಕೆ ಯಲ್ಲಿ ಐದು ಸಾವಿರಕ್ಕೂ ಹೆಚ್ಚು ಜನ ಈ ವೇಳೆ ಭಾಗವಹಿಸ್ದಿರು.

ಈ ಸಂದರ್ಭದಲ್ಲಿ ನಟ ವಿಜಯರಾಘವೇಂದ್ರ, ನಟಿ ಕಾವ್ಯ ಶೆಟ್ಟಿ, ಟ್ರಸ್ಟ್‌ನ ಅಧ್ಯಕ್ಷ ರಂಜಿತ್ ಸೋಲಂಕಿ, ಕಾರ್ಯದರ್ಶಿ ಆಶೀಶ್ ಸಕ್ಲೇಚಾ, ಪ್ರಾಜೆಕ್ಟ್ ಚೇರ್ಮನ್ ಪ್ರವೀಣ್ ಜೈನ್, ಮೆಂಟರ್ ಮನೀಶ್ ಕೋಠಾರಿ, ರೋಟರಿ ಗವರ್ನರ್ ಆಶಾ ಪ್ರಸನ್ನ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News