ಬೆಂಗಳೂರು : ವಿದೇಶಿ ಪ್ರಜೆ ನಿಗೂಢ ಸಾವು
Update: 2017-09-04 18:18 IST
ಬೆಂಗಳೂರು, ಸೆ.4: ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ನೈಜೀರಿಯ ದೇಶದ ಪ್ರಜೆ ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣ ಹೆಣ್ಣೂರು ರಸ್ತೆಯ ರೈಲ್ವೆ ಸೇತುವೆ ಬಳಿ ನಡೆದಿದೆ. ನಗರದ ಹೆಣ್ಣೂರಿನಲ್ಲಿ ವಾಸವಾಗಿದ್ದ ಶಿಗುಸಿ(33) ಎಂಬಾತ ನಿಗೂಢವಾಗಿ ಸಾವನ್ನಪ್ಪ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬಾಣಸವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.