ಸೆ.5 ರಂದು ಯು ಟರ್ನ್ ಕೃತಿ ಬಿಡುಗಡೆ
Update: 2017-09-04 18:22 IST
ಬೆಂಗಳೂರು, ಸೆ.4: ಎಸ್‌ಕೆಎಲ್ ಸಂಸ್ಥೆಯ ಮೂರನೇ ವಾರ್ಷಿಕೋತ್ಸವ ಹಾಗೂ ಸಂಸ್ಥೆಯ ಸ್ಥಾಪಕ ಡಿ.ಶಿವಕುಮಾರ್ ಅವರ ‘ಯು ಟರ್ನ್’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಸೆ.5 ರಂದು ನಗರದ ಕಸಾಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಸ್ನೇಹ ಬುಕ್ ಹೌಸ್ ಪುಸ್ತಕವನ್ನು ಪ್ರಕಟಿಸಿದ್ದು, ಸಾಹಿತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಹಿರಿಯ ಕವಿ ಡಾ.ದೊಡ್ಡರಂಗೇಗೌಡ, ಲೇಖಕಿ ಡಾ.ಎಚ್.ಎನ್.ಶುಭದ, ಕಥೆಗಾರ ಕೃಷ್ಣ ನಾಡಿಗ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಸ್ಥಾಪಕ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದೇ ವೇಳೆ ನಿವೃತ್ತ ಶಿಕ್ಷಕರಾದ ಎಚ್.ಆರ್.ಕೃಷ್ಣಪ್ಪ, ವೈ.ವಿ.ಪ್ರಸನ್ನಯ್ಯ, ಪದ್ಮನಾಭ ಹುನುಗುಂದ ಅವರಿಗೆ ಸನ್ಮಾನ ಮಾಡಲಾಗುತ್ತದೆ. ಯು ಟರ್ನ್ ತರಬೇತಿ ಶಿಬಿರದ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಲಾಗುತ್ತದೆ ಎಂದು ಅವರು ತಿಳಿಸಿದರು.