×
Ad

ಸೇನೆಗೆ ಅತ್ಯಾಧುನಿಕ ಲಘು ಹೆಲಿಕಾಪ್ಟರ್ ಒದಗಿಸಲಿರುವ ಎಚ್‌ಎಎಲ್

Update: 2017-09-04 22:17 IST

ಬೆಂಗಳೂರು, ಸೆ.4: ಭಾರತೀಯ ಸೇನೆಗೆ 41 ಹಾಗೂ ನೌಕಾಪಡೆಗೆ ಒಂದು ಅತ್ಯಾಧುನಿಕ ಲಘು ಹೆಲಿಕಾಪ್ಟರ್‌ಗಳನ್ನು ಒದಗಿಸುವ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ರಾಜ್ಯಸರಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೊನಾಟಿಕ್ಸ್ ಲಿ.(ಎಚ್‌ಎಎಲ್) ತಿಳಿಸಿದೆ.

 ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಪೂರಕವಾದ ಈ ಯೋಜನೆಗೆ 60 ತಿಂಗಳ ಕಾಲಾವಕಾಶವಿದೆ. ಸ್ವದೇಶೀ ಉತ್ಪಾದನೆಯಾದ ಲಘು ಹೆಲಿಕಾಪ್ಟರ್ ಬಗ್ಗೆ ಭಾರತೀಯ ರಕ್ಷಣಾ ಪಡೆಗೆ ಇರುವ ವಿಶ್ವಾಸದ ಪ್ರತೀಕವಾಗಿ ಈ ವ್ಯವಹಾರವನ್ನು ಎಚ್‌ಎಎಲ್‌ಗೆ ವಹಿಸಿಕೊಡಲಾಗಿದೆ ಎಂದು ಎಚ್‌ಎಎಲ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಟಿ.ಸುವರ್ಣ ರಾಜು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ದಿಲ್ಲಿಯಲ್ಲಿ ರಕ್ಷಣಾ ಇಲಾಖೆ ಹಾಗೂ ಎಚ್‌ಎಎಲ್ ಮಧ್ಯೆ ಈ ಕುರಿತಾದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News