×
Ad

ವಿಚಾರವಾದಿಗಳ ಧ್ವನಿ ಅಡಗಿಸುವ ಪ್ರಯತ್ನ: ಅರವಿಂದ ಮಾಲಗತ್ತಿ

Update: 2017-09-06 20:26 IST

ಬೆಂಗಳೂರು, ಸೆ.6: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ವಿಚಾರವಾದಿಗಳು, ಚಿಂತಕರ ಧ್ವನಿಯನ್ನು ಉಡುಗಿಸುವ ದುಷ್ಟ ಪ್ರಯತ್ನದಂತೆ ಕಾಣಿಸುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟಿಸಿದ್ದಾರೆ.

ವಿಚಾರವಾದಿಗಳಾದ ಡಾ.ಎಂ.ಎಂ.ಕಲಬುರ್ಗಿ, ಗೋವಿಂದ ಪನ್ಸಾರೆ, ನರೇಂದ್ರ ಧಾಬೋಲ್ಕರ್ ಹತ್ಯೆಗಳೊಂದಿಗೆ ಗೌರಿ ಲಂಕೇಶ್ ಅವರ ಹತ್ಯೆಗೂ ಸಾಮ್ಯತೆ ಇದ್ದಂತಿದೆ. ಈ ನಿಟ್ಟಿನಲ್ಲಿ ಸರಕಾರ ಕೂಡಲೇ ಹಂತಕರನ್ನು ಪತ್ತೆ ಮಾಡಿ, ಮುಂದೆ ಸಂಭವಿಸಬಹುದಾದ ವಿಚಾರವಾದಿಗಳ ಹತ್ಯೆಯನ್ನು ತಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.

ಗೌರಿ ಲಂಕೇಶ್ ಪತ್ರಕರ್ತರಾಗಿ, ಸಾಮಾಜಿಕ ಹೋರಾಟಗಾರರಾಗಿ ನಾಡಿನ ಏಳಿಗೆಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಕ್ಸಲ್ ಚಳವಳಿಗಾರರನ್ನು ಜನಸಮಾಜದ ಮುಖ್ಯವಾಹಿನಿಯತ್ತ ಬರುವಂತೆ ಪ್ರೇರೇಪಿಸಿ ಯಶಸನ್ನು ಕಂಡಿದ್ದರು. ಅಂತಹ ಮಾನವ ಪ್ರೇಮ ಹೊಂದಿದ್ದ ಪತ್ರಕರ್ತೆಯನ್ನು ಹತ್ಯೆ ಮಾಡಿರುವುದನ್ನು ಸಾಹಿತ್ಯ ಅಕಾಡೆಮಿ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದರು.

ಗೂಡ್ಸೆ ಸಂತತಿ ಉಪಟಳ: ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ಅಧಿಕಾರ ಬಂದ ನಂತರ ಮಹಾತ್ಮ ಗಾಂಧೀಜಿ ಕೊಂದ ನಾಥೂರಾಮ್ ಗೂಡ್ಸೆ ಸಂತತಿಯ ಉಪಟಳ ಹೆಚ್ಚಾಗಿದೆ. ಈ ಹಿಂದೆ ಧಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆಯ ಮುಂದುವರೆದ ಭಾಗವಾಗಿ ಗೌರಿ ಹತ್ಯೆ ನಡೆದಿದೆ ಎಂದು ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News