ಯುಎಸ್ ಓಪನ್ : ಐದು ಬಾರಿ ಚಾಂಪಿಯನ್ ರೋಜರ್ ಫೆಡರರ್ ಅವರನ್ನು ಮಣಿಸಿದ ಆರ್ಜೆಂಟಿನಾದ ಜುವಾನ್

Update: 2017-09-07 09:04 GMT

ನ್ಯೂಯಾರ್ಕ್,ಸೆ.7 : ಯುಎಸ್ ಓಪನ್ ಕ್ವಾರ್ಟರ್ ಫೈನಲ್ ಪಂದ್ಯಾವಳಿಯಲ್ಲಿನ ಅಚ್ಚರಿಯ ಫಲಿತಾಂಶವೊಂದರಲ್ಲಿ  ಐದು ಬಾರಿಯ ಚಾಂಪಿಯನ್ ರೋಜರ್ ಫೆಡರರ್ ಅವರನ್ನು ಸೋಲಿಸಿ  ಆರ್ಜೆಂಟಿನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರು  ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಜುವಾನ್ ಅವರು 7-5, 3-6,7-6 (10/8), 6-4 ಅಂತರದಿಂದ ಜಯ ಸಾಧಿಸಿ ಆರ್ಥರ್ ಆಶ್ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲು ನೆರೆದಿದ್ದ ಕ್ರೀಡಾಭಿಮಾನಿಗಳನ್ನು ಅಚ್ಚರಿಗೊಳಿಸಿದರು.

ಇಪ್ಪತ್ತೆಂಟು ವರ್ಷದ ಜುವಾನ್  ಅಗ್ರ ಶ್ರೇಯಾಂಕದ ರಫೇಲ್ ನಡಾಲ್ ಅವರನ್ನು ಶುಕ್ರವಾರ ನಡೆಯಲಿರುವ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಎದುರಿಸಲಿದ್ದಾರೆ. ಜುವಾನ್ ಅವರು ಇಲ್ಲಿಯ ತನಕ 2009ರಲ್ಲಿ ತಮ್ಮ ಏಕೈಕ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಪಡೆದಿದ್ದರು. ಈ ಪಂದ್ಯಾವಳಿಯಲ್ಲಿ ಅವರು ನಡಾಲ್ ಅವರನ್ನು ಸೆಮಿ ಫೈನಲ್ ಹಂತದಲ್ಲಿಯೇ ಸೋಲಿಸಿದ್ದರು.

ವಿಶ್ವ ರ್ಯಾಂಕಿಂಗಿನಲ್ಲಿ 28ನೇ ಸ್ಥಾನದಲ್ಲಿರುವ ಜುವಾನ್ ಅವರು 19 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿರುವ ಫೆಡರರ್ ಅವರನ್ನು ಸೋಲಿಸಿರುವುದು ವಿಶೇಷವೇ ಸರಿ. ಸೆಮಿಫೈನಲ್ ಪಂದ್ಯದಲ್ಲಿ ತಾವು 2009ರ ಇತಿಹಾಸವನ್ನು ಮರುಕಳಿಸುವ ಆತ್ಮವಿಶ್ವಾಸವನ್ನು ಅವರು  ವ್ಯಕ್ತಪಡಿಸಿದರು. ``ಅವರು ವಿಶ್ವದ ನಂ.1 ಆಟಗಾರರೆಂದು ನನಗೆ ಗೊತ್ತು. ಆದರೆ ನಿಮ್ಮೆಲ್ಲರ ಬೆಂಬಲವಿದ್ದರೆ ಜಯ ಖಂಡಿತ ಸಾಧ್ಯ,'' ಎಂದು ಅವರು ತಿಳಿಸಿದರು.

ಪಂದ್ಯ ಸೋತು ಯುಎಸ್ ಓಪನ್ ನಿಂದ ಹೊರ ನಡೆಯಬೇಕಾಗಿ ಬಂದಿರುವ ಫೆಡರರ್ ಆಘಾತಗೊಂಡವರಂತೆ ಕಂಡು ಬಂದರೂ ``ಹಾಗಾಗುತ್ತದೆ. ಹೇಗೆ ಎಂದು ಕೆಲವೊಮ್ಮೆ ವಿವರಿಸುವುದು ಕಷ್ಟ'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News