ಕೇಂದ್ರ ಸಚಿವ ಕಣ್ಣಂದಾನಂರಿಗೆ ಔತಣ ಏರ್ಪಡಿಸಿದ ಕೇರಳ ಮುಖ್ಯಮಂತ್ರಿ

Update: 2017-09-07 09:46 GMT

ಹೊಸದಿಲ್ಲಿ,ಸೆ.7: ಸಿಪಿಎಂ ತೊರೆದು ಬಿಜೆಪಿ ಸೇರಿ ಕೇಂದ್ರ ಸಚಿವರಾದ ಅಲ್ಫೋನ್ಸ್ ಕಣ್ಣಂದಾನಂರಿಗೆ ಸೌಹಾರ್ದ ಔತಣಕೂಟವನ್ನು  ಕೇರಳ ಮುಖ್ಯಮಂತ್ರಿ ಪಿಣರಾಯಿವಿಜಯನ್  ಏರ್ಪಡಿಸಿದ್ದಾರೆ. ದಿಲ್ಲಿಯಲ್ಲಿ ಸಿಪಿಎಂ ಪೊಲಿಟ್‍ಬ್ಯೂರೊ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಕೇರಳ ಮುಖ್ಯಮಂತ್ರಿ  ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ದಿಲ್ಲಿಯ ಕೇರಳ ಹೌಸ್‍ನಲ್ಲಿ   ಕಣ್ಣಂದಾನಂರನ್ನು ಭೇಟಿಯಾದರು.

ಕೇರಳದಲ್ಲಿ ಕಣ್ಣಂದಾನಂ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ತನ್ನ ರಾಜಕೀಯ ಜೀವನವನ್ನು ಆರಂಭಿಸಿದ್ದರು.  ಕೇಂದ್ರ ಸಚಿವರಾದ ಸಂತೋಷವನ್ನು  ಹಂಚಿಕೊಳ್ಳಲು ಅವರನ್ನು ಭೇಟಿಯಾಗಿದ್ದೇನೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಮುಖ್ಯಮಂತ್ರಿ ಸೌಹಾರ್ದ ಔತಣಕ್ಕೆ ಕರೆದದ್ದರಲ್ಲಿ ಸಂತೋಷವಿದೆ ಎಂದು ಕಣ್ಣಂದಾನಂ ಹೇಳಿದರು. ಪಿಣರಾಯಿ ವಿಜಯನ್ ತನ್ನನ್ನು ರಾಜಕೀಯಕ್ಕೆ ಕರೆತಂದವರು. ತನಗೆ ಎಂಎಲ್‍ಎ ಸೀಟು ಕೊಟ್ಟಿರುವುದು ಅವರೇ. ವೈಯಕ್ತಿಕವಾಗಿ ನಾವಿಬ್ಬರು ಬಹಳ ನಿಕಟ ಸಂಬಂಧವನ್ನು ಹೊಂದಿದ್ದೇವೆ. ಎಂದು ಕಣ್ಣಂದಾನಂ ಹೇಳಿದರು. ಇಬ್ಬರೂ  ಅರ್ಧಗಂಟೆಗಳ ಕಾಲ ಪರಸ್ಪರ ಸಮಾಲೋಚನೆ ನಡೆಸಿದರು.   ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್, ಸಂಸದ ಕೆ.ಕೆ. ರಾಗೇಶ್, ರೆಸಿಡೆಂಟ್ ಕಮಿಶನರ್ ಡಾ. ವಿಶ್ವಾಸ್ ಮೆಹ್ತ, ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಜಾನ್ ಬ್ರಿಟ್ಟಾಸ್ ಮುಖ್ಯಮಂತ್ರಿಯ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News