ಪತಿ ಕೊಲೆ ಪ್ರಕರಣ: ಪತ್ನಿ ಸೇರಿ ಇಬ್ಬರ ಬಂಧನ
Update: 2017-09-08 17:37 IST
ಬೆಂಗಳೂರು, ಸೆ.8: ಪತಿಯ ಕೊಲೆ ಪ್ರಕರಣ ಸಂಬಂಧ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಗಂಗಮ್ಮಗುಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗಂಗಮ್ಮಗುಡಿಯ ಕಮ್ಮಗೊಂಡನಹಳ್ಳಿಯ ವರಲಕ್ಷ್ಮೀ(28), ದಾಸರಹಳ್ಳಿಯ ರವೀಂದ್ರನಗರದ ರಾಕೇಶ್(23) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಸೆ.3 ರಂದು ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂದು ಪತಿ ಎಂ.ಬಾಬು(32) ಎಂಬುವರನ್ನು ರಾಕೇಶ್‌ನಿಂದ ವರಲಕ್ಷ್ಮೀ ಕೊಲೆ ಮಾಡಿಸಿರುವುದಾಗಿ ವಿಚಾರಣೆಯಲ್ಲಿ ತಿಳಿದುಬಂದಿದೆ.
ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಗಂಗಮ್ಮಗುಡಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.