ಮೆಕ್ಸಿಕೊದಲ್ಲಿ ಪ್ರಬಲ ಭೂಕಂಪ: ಕನಿಷ್ಠ 32 ಸಾವು

Update: 2017-09-08 18:53 GMT

ಮೆಕ್ಸಿಕೊ ಸಿಟಿ, ಸೆ. 8: ಮೆಕ್ಸಿಕೊದ ದಕ್ಷಿಣ ಕರಾವಳಿಯಲ್ಲಿ ಗುರುವಾರ ರಾತ್ರಿ ಅತ್ಯಂತ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 8.1ರಷ್ಟಿತ್ತು.

ಭೂಕಂಪದಿಂದಾಗಿ ಕನಿಷ್ಠ 32 ಮಂದಿ ಮೃತಪಟ್ಟಿದ್ದಾರೆ ಹಾಗೂ ಸಣ್ಣ ಪ್ರಮಾಣದ ಸುನಾಮಿ ಕಾಣಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದು ಮೆಕ್ಸಿಕೊದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪಗಳ ಪೈಕಿ ಒಂದಾಗಿದೆ.

ಭೂಕಂಪದ ಪರಿಣಾಮವಾಗಿ ಹಲವಾರು ಕಟ್ಟಡಗಳಲ್ಲಿ ಬಿರುಕುಗಳು ಉಂಟಾಗಿವೆ.

ಈ ಭೂಕಂಪವು 1985ರ ವಿನಾಶಕಾರಿ ಭೂಕಂಪಕ್ಕಿಂತಲೂ ಪ್ರಬಲವಾಗಿತ್ತು ಎನ್ನಲಾಗಿದೆ. ಅಂದಿನ ಭೂಕಂಪವು ಮೆಕ್ಸಿಕೊ ಸಿಟಿಯ ಹೆಚ್ಚಿನ ಭಾಗಗಳನ್ನು ನೆಲಸಮಗೊಳಿಸಿತ್ತು ಹಾಗೂ ಸಾವಿರಾರು ಮಂದಿ ಮೃತಪಟ್ಟಿದ್ದರು. ಆದರೆ, ಈ ಬಾರಿ ನಗರಕ್ಕೆ ಹೆಚ್ಚಿನ ಹಾನಿ ಸಂಭವಿಸಿಲ್ಲ.

ದಕ್ಷಿಣ ಮೆಕ್ಸಿಕೊದ ಹಲವು ಭಾಗಗಳಲ್ಲಿ ಹಲವು ಕಟ್ಟಡಗಳು ತೀವ್ರ ಹಾನಿಗೊಳಗಾಗಿವೆ.

ಓಕ್ಸಾಕದಲ್ಲಿ 23 ಮತ್ತು ಜುಕಿಟನ್‌ನಲ್ಲಿ 17 ಸಾವುಗಳು ಸಂಭವಿಸಿವೆ ರಾಜ್ಯದ ಗವರ್ನರ್ ಅಲೆಜಾಂಡ್ರೊ ಮುರತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News