ಹನ್ನೊಂದು ಜನರನ್ನು ಮದುವೆಯಾಗಿ ಹಣದೊಂದಿಗೆ ಪರಾರಿಯಾದ ಚಾಲಾಕಿ ಮಹಿಳೆ!

Update: 2017-09-09 07:34 GMT

ಥಾಯ್ಲೆಂಡ್, ಸೆ.9: ಇಲ್ಲೊಬ್ಬ ಮಹಿಳೆಯೊಬ್ಬಳು ಕಳೆದ ಎರಡು ವರ್ಷಗಳಲ್ಲಿ 11 ಪುರುಷರನ್ನು ವಿವಾಹವಾಗಿ, ಅವರಿಂದ ವಧುದಕ್ಷಿಣೆಯನ್ನೂ ಪಡೆದು ನಾಪತ್ತೆಯಾಗಿದ್ದಳು. 12ನೆ ಮದುವೆಯಾಗುವ ಯತ್ನದಲ್ಲಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಥಾಯ್ಲೆಂಡ್‌ನಲ್ಲಿ ವಿವಾಹವಾಗುವ ಪ್ರತಿ ಪುರುಷ ವಧುದಕ್ಷಿಣೆ ನೀಡುವ ಸಂಪ್ರದಾಯವಿದೆ. ಚಾಲಾಕಿ ಮಹಿಳೆ ಪ್ರತಿ ಪುರುಷನಿಂದ ಸುಮಾರು 6,000ದಿಂದ 30,000 ಯುಎಸ್ ಡಾಲರ್ ವಧುದಕ್ಷಿಣೆ ಪಡೆದು ಪರಾಗಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

 ವಧುದಕ್ಷಿಣೆ ಪಡೆದು ಮದುವೆಯಾದ ಬಳಿಕ ಏನಾದರೊಂದು ನೆಪ ಹೇಳಿ ಗಂಡನನ್ನು ಬಿಟ್ಟು ಪರಾರಿಯಾಗುತ್ತಿದ್ದಳು. ಈಕೆ ಪುರುಷರನ್ನು ಸೆಳೆಯಲು ಫೇಸ್‌ಬುಕ್‌ನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಳು. ಆಗಸ್ಟ್ ತಿಂಗಳೊಂದರಲ್ಲೇ ನಾಲ್ವರನ್ನು ವಿವಾಹವಾಗಿ ಕೈಕೊಟ್ಟಿದ್ದಾಳೆ. ‘ಓಡಿಹೋಗುವ ವಧು’ ಎಂದೇ ಖ್ಯಾತಿ ಪಡೆದಿದಿರುವ ಈ ಮಹಿಳೆಯಿಂದ ಮೋಸ ಹೋಗಿರುವ 11 ಪುರುಷರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಪೊಲೀಸರು ಮೋಸಗಾರ್ತಿ ಯುವತಿಯನ್ನು ಬಂಧಿಸಿದ್ದು, ಯಾವುದೇ ಪ್ರಕರಣ ದಾಖಲಿಸಿಲ್ಲ. ಆದರೆ, ಆಕೆಯನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆಕೆಯ ಹೆತ್ತವರನ್ನು ವಿಚಾರಣೆ ನಡೆಸುವ ಸಾಧ್ಯತೆಯಿದ್ದು, ಅವರು ತಲೆಮರೆಸಿಕೊಂಡಿದ್ದಾರೆ.

‘‘ನಾನು ಕೇವಲ 7 ಜನರಿಗೆ ಮೋಸ ಮಾಡಿದ್ದು ನಿಜ. ನಾನು ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ನನ್ನನ್ನು ಸಂಪರ್ಕಿಸಿದ ಪುರುಷರು ಸ್ವಯಂಪ್ರೇರಿತರಾಗಿ ನನ್ನ ಕುಟುಂಬ ನಡೆಸುತ್ತಿರುವ ಹಣ್ಣಿನ ವ್ಯಾಪಾರದಲ್ಲಿ ಹಣಹೂಡಿಕೆ ಮಾಡಿದ್ದಾರೆ’’ ಎಂದು ಹೇಳಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News