500 ವಿಕೆಟ್ ಕ್ಲಬ್‌ಗೆ ಆ್ಯಂಡರ್ಸನ್ ಸೇರ್ಪಡೆ

Update: 2017-09-09 09:24 GMT

ಲಂಡನ್, ಸೆ.8: ಮೂರನೆ ಟೆಸ್ಟ್‌ನಲ್ಲಿ ವೆಸ್ಟ್‌ಇಂಡೀಸ್‌ನ ಆರಂಭಿಕ ಆಟಗಾರ ಕ್ರೆಗ್ ಬ್ರಾತ್‌ವೇಟ್ ವಿಕೆಟ್ ಕಬಳಿಸಿದ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ 500 ವಿಕೆಟ್ ಮೈಲುಗಲ್ಲು ತಲುಪಿದರು. ಆ್ಯಂಡರ್ಸನ್ 500 ವಿಕೆಟ್ ಕ್ಲಬ್‌ಗೆ ಸೇರ್ಪಡೆಯಾದ ಇಂಗ್ಲೆಂಡ್‌ನ ಮೊತ್ತಮೊದಲ ಹಾಗೂ ವಿಶ್ವದ ಆರನೆ ಬೌಲರ್ ಆಗಿದ್ದಾರೆ.

ಆ್ಯಂಡರ್ಸನ್ 500 ವಿಕೆಟ್ ಪಡೆದಿರುವ ಏಕೈಕ ಸಕ್ರಿಯ ಬೌಲರ್ ಆಗಿದ್ದಾರೆ. ತ್ರಿವಳಿ ಸ್ಪಿನ್ನರ್‌ಗಳಾದ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್(800), ಆಸ್ಟ್ರೇಲಿಯದ ಶೇನ್ ವಾರ್ನ್(708), ಭಾರತದ ಅನಿಲ್ ಕುಂಬ್ಳೆ(619), ಆಸ್ಟ್ರೇಲಿಯದ ವೇಗಿ ಗ್ಲೆನ್ ಮೆಕ್‌ಗ್ರಾತ್(563) ಹಾಗೂ ವಿಂಡೀಸ್‌ನ ಬೌಲರ್ ಕೋರ್ಟ್ನಿ ವಾಲ್ಶ್(519) ಈ ಸಾಧನೆ ಮಾಡಿದ್ದಾರೆ.

ಆ್ಯಂಡರ್ಸನ್ 500 ವಿಕೆಟ್ ಪಡೆದ ಮೂರನೆ ವೇಗದ ಬೌಲರ್. ವಾಲ್ಶ್ 2001ರಲ್ಲಿ ಕೇವಲ 129 ಪಂದ್ಯಗಳಲ್ಲಿ 500 ವಿಕೆಟ್ ಪಡೆದಿದ್ದಾರೆ. ಮೆಕ್‌ಗ್ರಾತ್ 2005ರಲ್ಲಿ ಆ್ಯಂಡರ್ಸನ್‌ರಂತೆಯೇ ಲಾರ್ಡ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು.

‘‘ನಾನು ಮೈದಾನದಲ್ಲಿ ಸಂಪೂರ್ಣ ಫಿಟ್ ಇರಲು ಬಯಸುವೆ. ಸಾಧ್ಯವಾದಷ್ಟು ದೀರ್ಘಕಾಲ ಆಡಲು ಬಯಸುವೆ. ಇನ್ನು ಕೆಲವು ವರ್ಷ ಆಡಿದರೆ ಮೆಕ್‌ಗ್ರಾತ್‌ರ ದಾಖಲೆಯನ್ನು ಸರಿಗಟ್ಟಬಹುದು’’ ಎಂದು ಆ್ಯಂಡರ್ಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News