×
Ad

ಗ್ರೀನ್‌ಲೈಟ್ ಸೆಂಟರ್‌ಗೆ ಚಾಲನೆ

Update: 2017-09-11 19:08 IST

ಬೆಂಗಳೂರು, ಸೆ.11: ಶೇರ್ ಮತ್ತು ರೇಡಿಂಗ್ ಸಂಸ್ಥೆಯಾದ ಉಬರ್ ವತಿಯಿಂದ ನಗರದ ವಿಂಡ್ ಟನಲ್ ರಸ್ತೆಯಲ್ಲಿ ಆರಂಭಿಸಿರುವ ದೇಶದ ಅತ್ಯಂತ ದೊಡ್ಡ ಗ್ರೀನ್‌ಲೈಟ್ ಸೆಂಟರ್ ಅನ್ನು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಬಿ.ಬಸವರಾಜು ಉದ್ಘಾಟಿಸಿದ್ದಾರೆ.

ಚಾಲನೆ ಕೊಟ್ಟ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಸುಧಾರಣೆಗೆ ರಾಜ್ಯ ಸರಕಾರ ಹೆಚ್ಚಿನ ಗಮನ ನೀಡುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಅಪಘಾತಗಳಲ್ಲಿ ಹೆಚ್ಚಿನವು ದ್ವಿಚಕ್ರ ವಾಹನಗಳದ್ದೇ ಆಗಿವೆ. ಸರಿಯಾದ ಚಾಲನೆಯಿಂದ ಹಾಗೂ ವಾಹನ ಚಲಾವಣೆಯ ತರಬೇತಿಯಿಂದ ಇವುಗಳನ್ನು ತಡೆಗಟ್ಟುವುದು ಸಾಧ್ಯ ಎಂದರು.

ಉಬರ್‌ ನಂತಹ ಸೇವಾದಾರರು ಗ್ರಾಹಕರಿಗೆ ಗುಣಮಟ್ಟದ ಸೇವೆಗಳನ್ನು ನೀಡುತ್ತಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಚಾಲಕರು ಇನ್ನೂ ಹೆಚ್ಚಿನ ಗಮನ ನೀಡಬೇಕು. ಕೇವಲ ಪೊಲೀಸ್ ಮತ್ತು ಸಾರಿಗೆ ಇಲಾಖೆಯವರಿಂದ ರಸ್ತೆ ಸುರಕ್ಷತೆ ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ತಿಳಿಸಿದರು.

ರೈತ ಸಾರಥಿ ಯೋಜನೆ: ಟ್ರ್ಯಾಕ್ಟರ್ ಟ್ರೈಲರ್‌ಗಳಿಂದ ಸಂಭವಿಸುವ ಅಪಘಾತವನ್ನು ತಡೆಯಲು ಸರಕಾರ ರೈತ ಸಾರಥಿ ಯೋಜನೆಯನ್ನು ಜಾರಿಗೆ ತಂದಿದೆ, ಈ ಯೋಜನೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಟ್ರಾಕ್ಟರ್ ಚಾಲನೆ ಮಾಡುವವರಿಗೆ ತರಬೇತಿ ಮತ್ತು ವಾಹನ ಚಾಲನಾ ಪರವಾನಗಿ ನೀಡಲಾಗುವುದು ಎಂದರು.

ದಕ್ಷಿಣ ಭಾರತದ ಉಬರ್‌ನ ಜನರಲ್ ಮ್ಯಾನೇಜರ್ ಕ್ರಿಸ್ಟಿಯನ್ ಫ್ರೀಸ್ ಮಾತನಾಡಿ, ಪ್ರಯಾಣದಲ್ಲಿ ಸಮಯ ವ್ಯರ್ಥವನ್ನು ತಪ್ಪಿಸಲು ಗ್ರೀನ್‌ಲೈಟ್ ಸೆಂಟರ್ ಆರಂಭಿಸಲಾಗಿದೆ. ಸೆಂಟರ್ ಮೂಲಕ ವಾರಕ್ಕೆ 4,000ಕ್ಕೂ ಹೆಚ್ಚು ಚಾಲಕ ಪಾಲುದಾರರು ನೋಂದಾಯಿಸಿಕೊಂಡಿದ್ದಾರೆ. ದೇವನಹಳ್ಳಿ, ಯಶವಂತಪುರ ಮತ್ತು ಎಚ್‌ಬಿಆರ್ ಲೇಔಟ್‌ನಲ್ಲಿ ಈ ಸೇವೆ ಆರಂಭಿಸಲಾಗಿದೆ ಎಂದು ವಿವರಿಸಿದರು.

ಬೆಂಗಳೂರಿನಲ್ಲಿ ಹಂಗಾಮಾ ಟಿವಿಯ ‘ಲಾಫ್ಟರೈಸ್ ವಿತ್ ಚಾಚಾ ಬತೀಜಾ’ ಕಾರ್ಯಕ್ರಮ ಒತ್ತಡದಲ್ಲಿರುವ ಮಕ್ಕಳ ಆನಂದ ಅನುಭವಿಸಲು ವಿನೂತನವಾಗಿ ರೂಪಿಸಲಾಗಿದೆ. ಕಾರ್ಯಕ್ರಮ 11ಲಕ್ಷ ಮಕ್ಕಳನ್ನು ತಲುಪುತ್ತಿದ್ದು, ಕೋಲ್ಕತಾ, ಅಹ್ಮದಾಬಾದ್, ಸೂರತ್, ಬರೋಡಾ, ರಾಜ್‌ಕೋಟ್, ಕೊಯಮತ್ತೂರು, ಮಧುರೈ, ತಿರುಚಿನಾಪಳ್ಳಿ, ಸೇಲಂ, ವೆಲ್ಲೋರ್, ತಿರುನಲ್ವೇಲಿ, ತಂಜಾವೂರ್, ಕಡಲೂರು, ಕಾಂಚೀಪುರಂ, ಹೊಸೂರ್, ನಮಕ್ಕಲ್, ಕರೂರ್ ಮುಂತಾದ ಅನೇಕ ನಗರಗಳನ್ನು ತಲುಪುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News