ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು
Update: 2017-09-11 21:35 IST
ಬೆಂಗಳೂರು, ಸೆ.11: ಕೆರೆಯಲ್ಲಿ ಈಜಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೇಗೂರಿನ ಮಣಿಪಾಲ್ ಕೌಂಟ್ರಿ ರಸ್ತೆಯಲ್ಲಿ ವಾಸಿಸುತ್ತಿದ್ದ ಚೇತನ್(21) ಎಂಬಾತ ಮೃತಪಟ್ಟಿರುವ ಯುವಕ ಎಂದು ಪೊಲೀಸರು ಗುರುತಿಸಿದ್ದಾರೆ.
ದೊಡ್ಡಬಳ್ಳಾಪುರ ಮೂಲದ ಚೇತನ್ ರವಿವಾರ ಸಂಜೆ 5ರ ವೇಳೆ ಎಇಸಿಎಸ್ ಲೇಔಟ್ ಕೆರೆಯಲ್ಲಿ ಸ್ನೇಹಿತನೊಂದಿಗೆ ಈಜಾಡಲು ಹೋಗಿದ್ದಾರೆ. ಈಜು ಬರದೆ ಆಳಕ್ಕೆ ಹೋದ ಚೇತನ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ರಾತ್ರಿ 8:30ರ ವೇಳೆ ಮೃತದೇಹವನ್ನು ಹೊರ ತೆಗೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣ ದಾಖಲಿಸಿರುವ ಬೇಗೂರು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.