×
Ad

ಅರ್ಜಿದಾರರ ಮನವಿ ಪರಿಗಣಿಸಲು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ

Update: 2017-09-11 21:38 IST

ಬೆಂಗಳೂರು, ಸೆ.11: ಶಿವಾನಂದ ವೃತ್ತದ ಸ್ಟೀಲ್ ಫ್ಲೈಓವರ್ ನಿರ್ಮಾಣಕ್ಕೆ ವಶಪಡಿಸಿಕೊಂಡಿರುವ ಜಮೀನಿಗೆ ಭೂ ಸ್ವಾಧೀನ ಕಾಯ್ದೆ-2013ರ ಅನುಗುಣವಾಗಿ ಪರಿಹಾರ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಅರ್ಜಿದಾರರ ಮನವಿ ಪರಿಗಣಿಸಲು ಬಿಬಿಎಂಪಿಗೆ ನಿರ್ದೇಶಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿತು.

ಈ ಸಂಬಂಧ ಜಿ.ಎನ್.ಲಕ್ಷ್ಮೀಪತಿ ಸೇರಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಡಿ.ಎನ್.ಮಂಜುನಾಥ್ ಅವರು, ಸರಕಾರ ಶಿವಾನಂದ ವೃತ್ತದ ಬಳಿ ಸ್ಟೀಲ್ ಫ್ಲೈಓವರ್ ನಿರ್ಮಾಣಕ್ಕಾಗಿ ಸ್ಥಳೀಯರಿಂದ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ. ಆದರೆ, ಭೂ ಸ್ವಾಧೀನ ಕಾಯ್ದೆ-2013ರ ಅನುಗುಣವಾಗಿ ಸರಕಾರ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡದೇ ಭೂ ಸ್ವಾಧೀನ ಕಾಯ್ದೆ-2009ರ ಅನುಗುಣವಾಗಿ ಪರಿಹಾರ ನೀಡಲು ಮುಂದಾಗಿದೆ. ಇದರಿಂದ, ಅರ್ಜಿದಾರರಿಗೆ ಅನ್ಯಾಯಾಗಲಿದೆ ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಬಿಡಿಎ ಈಗಾಗಲೇ ಭೂ ಸ್ವಾಧೀನ ಕಾಯ್ದೆ-2013ರನ್ನು ಜಾರಿಗೆ ತಂದಿದೆ. ಹೀಗಾಗಿ, ಬಿಬಿಎಂಪಿ ಅರ್ಜಿದಾರರ ಮನವಿಯನ್ನು ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News