ದಕ್ಷಿಣ ಆಫ್ರಿಕ ಸರಣಿಗೆ ಬಾಂಗ್ಲಾ ತಂಡ ಪ್ರಕಟ

Update: 2017-09-11 18:32 GMT

ಢಾಕಾ, ಸೆ.11: ದಕ್ಷಿಣ ಆಫ್ರಿಕ ವಿರುದ್ಧ ಸೆ.28 ಆರಂಭವಾಗಲಿರುವ ಎರಡು ಟೆಸ್ಟ್‌ಗಳ ಪ್ರವಾಸ ಸರಣಿಗೆ ಬಾಂಗ್ಲಾದೇಶ ತಂಡ ಕ್ರಿಕೆಟ್ ತಂಡ ಸೋಮವಾರ ಪ್ರಕಟಗೊಂಡಿದ್ದು, ಬ್ಯಾಟ್ಸ್‌ಮನ್ ಮಹಮ್ಮುದುಲ್ಲಾ ಅವರನ್ನು 15 ಮಂದಿಯ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಟೆಸ್ಟ್ ಸರಣಿಯಿಂದ 6 ತಿಂಗಳು ದೂರ ಉಳಿಯಲು ಅವಕಾಶ ನೀಡುವಂತೆ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದ್ದಾರೆ.ಈ ಕಾರಣದಿಂದಾಗಿ ಅವರ ಮನವಿಯನ್ನು ಪುರಸ್ಕರಿಸಿರುವ ಆಯ್ಕೆ ಸಮಿತಿ ಅನುಭವಿ ಆಟಗಾರ ಮಹಮ್ಮುದುಲ್ಲಾರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಮಹಮ್ಮುದುಲ್ಲಾ ಕಳೆದ ಮಾರ್ಚ್‌ನಲ್ಲಿ ಲಂಕಾ ವಿರುದ್ಧ ಕೊನೆಯ ಬಾರಿ ಆಡಿದ್ದರು.

ಬಾಂಗ್ಲಾದೇಶ ತಂಡ: ಮುಶ್ಫೀಕುರ್ರಹೀಂ (ನಾಯಕ), ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಇಮ್ರುಲ್ ಕೈಸ್, ಶಬೀರ್ ರಹ್ಮಾನ್, ಮಹಮ್ಮುದುಲ್ಲಾ, ಲಿಟ್ಟನ್ ದಾಸ್, ಮೆಹೆೆದಿ ಹಸನ್, ತೈಜುಲ್ ಹಸನ್ ಇಸ್ಲಾಂ, ಮುಸ್ತಫಿಝುರ್ರಹ್ಮಾನ್, ರುಬೆಲ್ ಹುಸೈನ್, ಶಫಿಯುಲ್ ಇಸ್ಲಾಂ, ತಾಸ್ಕಿನ್ ಅಹ್ಮದ್, ಸುಭಾಷಿಸ್ ರಾಯ್, ಮೊಮಿನುಲ್ ಹಕ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News