ಅಂಪೈರ್‌ಗೆ ವಿಚಿತ್ರವಾಗಿ ಮನವಿ ಮಾಡಿ ದಂಡ ತೆತ್ತ ಬೌಲರ್!

Update: 2017-09-12 06:30 GMT

ಬಾರ್ಬಡಾಸ್, ಸೆ.12: ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್)ಫೈನಲ್‌ನಲ್ಲಿ ಚಿನಾಮನ್ ಬೌಲರ್‌ವೊಬ್ಬ ಅಂಪೈರ್ ತನ್ನ ಮನವಿಯನ್ನು ತಿರಸ್ಕರಿಸಿದ್ದಕ್ಕೆ ವಿಲಕ್ಷಣವಾಗಿ ಪ್ರತಿಭಟಿಸಿದ ಘಟನೆ ನಡೆದಿದೆ.

ದಕ್ಷಿಣ ಆಫ್ರಿಕದ ಬೌಲರ್ ತಬ್ರೈಝ್ ಶಂಸಿ ಅಂಪೈರ್ ತನ್ನ ಮನವಿಯನ್ನು ಪುರಸ್ಕರಿಸದ್ದಕ್ಕೆ ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸಿ ನೀತಿಸಂಹಿತೆ ಲೆವೆಲ್-2ನ್ನು ಉಲ್ಲಂಘಿಸಿದ್ದರು. ಈ ತಪ್ಪಿಗೆ ಪಂದ್ಯಶುಲ್ಕದಲ್ಲಿ ಅರ್ಧದಷ್ಟು ಮೊತ್ತವನ್ನು ದಂಡವಾಗಿ ತೆತ್ತಿದ್ದಾರೆ.

ಸೈಂಟ್ ಕಿಟ್ಸ್ ತಂಡವನ್ನು ಪ್ರತಿನಿಧಿಸಿದ ಶಂಸಿ ಟ್ರಿಂಬಾಗೊ ನೈಟ್ ರೈಡರ್ಸ್ ತಂಡದ ಜಾವೊನ್ ಸಿಯರಿಸ್ ವಿರುದ್ಧ ಎಲ್‌ಬಿಡಬ್ಲುಗಾಗಿ ಅಂಪೈರ್ ಬಳಿ ಮನವಿ ಮಾಡಿದರು. ಶಂಸಿ ಮನವಿಯನ್ನು ಅಂಪೈರ್ ತಿರಸ್ಕರಿಸಿದರು. ಅಂಪೈರ್ ನಿರ್ಧಾರದಿಂದ ಹತಾಶಗೊಂಡ ಶಂಸಿ ಮೈದಾನದಲ್ಲಿ ವಿಚಿತ್ರ ಹಾವಭಾವದಿಂದ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಶಂಸಿ ತನ್ನ ವರ್ತನೆಗೆ ಟ್ವಿಟರ್‌ನ ಮೂಲಕ ಕ್ಷಮೆ ಯಾಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News