ಮ್ಯಾಗ್ಮಾ ಫಿನ್‌ಕಾರ್ಪ್ ಸಂಸ್ಥೆಗೆ ಎಕ್ಸ್‌ಲೆನ್ಸ್ ಅವಾರ್ಡ್
Update: 2017-09-12 18:18 IST
ಬೆಂಗಳೂರು, ಸೆ. 12: ಮ್ಯಾಗ್ಮಾ ಫಿನ್‌ಕಾರ್ಪ್ ಲಿಮಿಟೆಡ್‌ಗೆ ಸಂಸ್ಥೆಯ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ ಕಾರ್ಯಕ್ರಮ ‘ಹೈವೇ ಹೀರೋಸ್’ಗಾಗಿ ಪ್ರತಿಷ್ಠಿತ ಬಿಟಿ-ಸಿಎಸ್‌ಆರ್ ಎಕ್ಸ್‌ಲೆನ್ಸ್ ಅವಾರ್ಡ್ 2017 ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿಯನ್ನು ಇತ್ತೀಚಿಗೆ ದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ನೋಯ್ಡಿದ ಸ್ಪೆಷಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಲವ್‌ಕುಮಾರ್ ಪ್ರದಾನ ಮಾಡಿದರು. ಈ ವೇಳೆ ಸಾಮಾಜಿಕ, ಸಾಂಸ್ಥಿಕ ಹೊಣೆಗಾರಿಕೆ ಮತ್ತು ಆಡಳಿತ ಭಾಗದ ಹಿರಿಯ ಉಪಾಧ್ಯಕ್ಷ ಕೌಶಿಕ್ ಸಿನ್ಹಾ ಉಪಸ್ಥಿತರಿದ್ದು, ಪ್ರಶಸ್ತಿ ಸ್ವೀಕರಿಸಿದರು.