4ರಿಂದ 9ನೆ ತರಗತಿಯ ಸರಕಾರಿ, ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಅ.27, 28ರಂದು ಸಾಧನಾ ಪರೀಕ್ಷೆ
Update: 2017-09-12 20:09 IST
ಬೆಂಗಳೂರು, ಸೆ.12: ರಾಜ್ಯದ ಎಲ್ಲ ಸರಕಾರಿ ಹಾಗೂ ಅನುದಾನಿತ ಶಾಲೆಗಳ 4ರಿಂದ 9ನೆ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಅಕ್ಟೋಬರ್ 27, 28ರಂದು ಸೆನ್ಸಸ್ ಆಧಾರಿತ ‘ರಾಜ್ಯ ಸಾಧನಾ ಪರೀಕ್ಷೆ’ಯನ್ನು ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ ತಿಳಿಸಿದೆ.
ಸಾಧನಾ ಪರೀಕ್ಷೆಗಾಗಿ ವಿದ್ಯಾರ್ಥಿಗಳ ಮಾಹಿತಿಯನ್ನು ಎಸ್‌ಎಟಿಎಸ್ ಮೂಲಕ ಪಡೆಯಲಾಗುವುದು. ಒಂದು ವೇಳೆ ಎಸ್‌ಎಟಿಎಸ್‌ನಲ್ಲಿ ವಿದ್ಯಾರ್ಥಿಗಳ ಮಾಹಿತಿ ಬಿಟ್ಟು ಹೋಗಿದ್ದರೆ ಕೂಡಲೇ ಸೇರ್ಪಡೆಗೊಳಿಸಬೇಕು. ಎಸ್‌ಎಟಿಎಸ್ ಮಾಹಿತಿಯನ್ನು ಆಧರಿಸಿ ಪ್ರತಿ ಶಾಲೆಗೂ ಪ್ರಶ್ನೆ ಪತ್ರಿಕೆಯನ್ನು ಸರಬರಾಜು ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.