×
Ad

"ತೂಕಡಿಸುವುದನ್ನು ಬಿಟ್ಟು ಮುಂದೆ ಬನ್ನಿ"

Update: 2017-09-12 20:53 IST
ಫೈಲ್ ಚಿತ್ರ

ಬೆಂಗಳೂರು, ಸೆ.12: ಮಂಗಳವಾರ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿಯ ದಕ್ಷಿಣ ಕರ್ನಾಟಕ ಜಿಲ್ಲೆಗಳ ಚುನಾವಣಾ ಉಸ್ತುವಾರಿಗಳ ಸಭೆಯಲ್ಲಿ ತೂಕಡಿಸುತ್ತಿದ್ದ ಸಂಸದ ಪ್ರತಾಪ್ ಸಿಂಹ ಹಾಗೂ ಭಗವಂತ್‌ ಕೂಬಾ ಅವರಿಗೆ ಯಡಿಯೂರಪ್ಪ ಅವರು ಗದರಿದ ಘಟನೆ ನಡೆದಿದೆ.

ಕಾರ್ಯಕ್ರಮ ಉದ್ಘಾಟನಾ ಸಂದರ್ಭ  ಹಿಂದಿನ ಸಾಲಿನಲ್ಲಿ ಕುಳಿತಿದ್ದ ಸಂಸದ ಪ್ರತಾಪ್ ಸಿಂಹ ಹಾಗೂ ಭಗವಂತ್‌ ಕೂಬಾ ತೂಕಡಿಸುತ್ತಿದ್ದರು. ಈ ಸಂದರ್ಭ ಅವರನ್ನು ಗಮನಿಸಿದ ಯಡಿಯೂರಪ್ಪ, "ತೂಕಡಿಸುವುದನ್ನು ಬಿಟ್ಟು ಮುಂದೆ ಬನ್ನಿ" ಎಂದು ಗದರಿದರು ಎನ್ನಲಾಗಿದೆ. ಇದರಿಂದ ಎಚ್ಚೆತ್ತ  ಇಬ್ಬರು ಸಂಸದರು ಬಳಿಕ ಮುಂದೆ ಬಂದು ಎರಡನೆ ಸಾಲಿನಲ್ಲಿ ಕುಳಿತರು.

ಕಾರ್ಯಕ್ರಮದ ನಡುವೆಯೇ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದರಿಂದ ಪ್ರತಾಪ್ ಸಿಂಹ ಹಾಗೂ ಭಗವಂತ್‌ ಕೂಬಾ ಮುಜುಗರಕ್ಕೊಳಗಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News