ಟ್ವೆಂಟಿ-20 ಪಂದ್ಯ: ಪಾಕ್ ಜಯಭೇರಿ

Update: 2017-09-12 18:30 GMT

ಲಾಹೋರ್, ಸೆ.12: ವಿಶ್ವ ಇಲೆವೆನ್ ತಂಡದ ವಿರುದ್ಧದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನ ತಂಡ 20 ರನ್‌ಗಳಿಂದ ಜಯ ಸಾಧಿಸಿದೆ.

ಗಡ್ಡಾಫಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಗೆಲ್ಲಲು 198 ರನ್ ಗುರಿ ಪಡೆದಿದ್ದ ವಿಶ್ವ ಇಲೆವೆನ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 177 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಇಲೆವೆನ್ ಪರ ನಾಯಕ ಎಫ್‌ಡು ಪ್ಲೆಸಿಸ್(29) ಹಾಶಿಮ್ ಅಮ್ಲ(26) ಹಾಗೂ ಟಿಮ್ ಪೈನ್(25) ಹಾಗೂ ಡರೆನ್ ಸಮ್ಮಿ(ಅಜೇಯ 29) ಎರಡಂಕೆಯ ಸ್ಕೋರ್ ದಾಖಲಿಸಿದರು. ಪಾಕ್ ಪರ ಸೊಹೈಲ್ ಖಾನ್(2-28), ರಾಯಿಸ್(2-37) ಹಾಗೂ ಶಾದಾಬ್ ಖಾನ್(2-33) ತಲಾ 2 ವಿಕೆಟ್ ಪಡೆದರು.

ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ತಂಡ ಬಾಬರ್ ಆಝಂ(89), ಶುಐಬ್ ಮಲಿಕ್(38) ಹಾಗೂ ಶೆಹಝಾದ್(39) ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 197 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News