ಸೌದಿ ಅರೇಬಿಯ : ಖಾಸಗಿ ಟ್ಯಾಕ್ಸಿಗಳಿಗೆ ಪರವಾನಿಗೆ ಇಲ್ಲ

Update: 2017-09-13 10:52 GMT

ರಿಯಾದ್, ಸೆ.13: ಖಾಸಗಿ ಟ್ಯಾಕ್ಸಿಗಳಿಗೆ ಲೈಸೆನ್ಸ್ ನೀಡದಂತೆ ಸಾರ್ವಜನಿಕ ಸಾರಿಗೆ ಸಂಸ್ಥೆ ಮುಖ್ಯಸ್ಥ ಡಾ. ರುಮೈಹ್ ಬಿನ್ ಮುಹಮ್ಮದ್ ಅಲ್ ರುಮೈಹ್ ಆದೇಶಿಸಿದ್ದಾರೆ.

ಟ್ಯಾಕ್ಸಿ ಕ್ಷೇತ್ರದಲ್ಲಿ ಸಂಪೂರ್ಣ ಮರುಪರಿಶೀಲನೆ  ಪೂರ್ಣಗೊಳ್ಳುವವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಈ ಕ್ಷೇತ್ರದಲ್ಲಿ 1,6700 ಹೆಚ್ಚು ಸ್ವದೇಶಿಗಳಿಗೆ ಕೆಲಸ ನೀಡಿದ ಬಳಿಕ ಲೈಸೆನ್ಸ್ ನೀಡುವುದನ್ನು ನಿಲ್ಲಿಸಲಾಗಿದೆ.

 ರಾಷ್ಟ್ರ ಹಿತಕ್ಕೆ ಪೂರಕವಲ್ಲದ ನಿರ್ಧಾರಗಳನ್ನು ಸ್ಥಗಿತಗೊಳಿಸಲು ಸಾರ್ವಜನಿಕ ಸಾರಿಗೆ ಇಲಾಖೆ ಬಯಸುತ್ತಿದೆ.

 ಟ್ಯಾಕ್ಸಿ ಕ್ಷೇತ್ರದಲ್ಲಿ ಸ್ವದೇಶೀಕರಣದ ಭಾಗವಾಗಿಸ್ವದೇಶಿಗಳಿಗೆ ಉದ್ಯೋಗ ನೀಡಲು ಸಹಾಯಕವಾಗದ ಯಾವುದೇ ತೀರ್ಮಾನವನ್ನು ಸಂಸ್ಥೆ ಬೆಂಬಲಿಸದು ಎಂದುಅವರು ಹೇಳಿದರು.

ಈಗ ಸರ್ವಿಸ್ ನಡೆಸುವ ಟ್ಯಾಕ್ಸಿಕಂಪೆನಿಗಳು ದೇಶದ ಪ್ರತಿಯೊಂದು ಪಟ್ಟಣಕ್ಕೂ ಅಥಾರಿಟಿ ನಿಶ್ಚಯಿಸಿದ ದರವನ್ನೇ ಪ್ರಯಾಣಿಕರಿಂದ ಪಡೆಯಬೇಕು. ಕಂಪೆನಿಯ ಕಚೇರಿಗಳಲ್ಲಿ ದರ ಪಟ್ಟಿಯನ್ನು ಲಗತ್ತಿಸಬೇಕು.

ಕೆಲಸಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ಅಥಾರಿಟಿಯನ್ನು ಸಂಪರ್ಕಿಸಿದ ಬಳಿಕವೇ ನೀಡಬೇಕು. ಕಾನೂನು ಉಲ್ಲಂಘಿಸುವವರ ಲೈಸನ್ಸ್ ರದ್ದುಪಡಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News