ಮಧುಗಿರಿ ಸೌಮ್ಯ ಅತ್ಯಾಚಾರ, ಕೊಲೆ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ

Update: 2017-09-13 15:44 GMT

ಬೆಂಗಳೂರು, ಸೆ.13: ಶಾಲಾ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮುಕುಂದನಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಗಿರೇಗೊಂಡನಹಳ್ಳಿ ಗ್ರಾಮದ ಸೌಮ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಆರೋಪಿ ಮುಕುಂದನಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆ ಕಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮತ್ತು ಪ್ರಕರಣದಿಂದ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ಮುಕುಂದ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ರವಿ ಮಳೀಮಠ ಮತ್ತು ಜಾನ್ ಮೈಕಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠವು ಗಲ್ಲು ಶಿಕ್ಷೆ ುನ್ನು ಜೀವಾವಧಿಗೆ ಕಡಿತಗೊಳಿಸಿತು.

2007ರ ಡಿ.13ರಂದು ಬಾಲಕಿ ಸೌಮ್ಯ ಮಧುಗಿರಿ ತಾಲೂಕಿನಲ್ಲಿರುವ ಸರಕಾರಿ ಶಾಲೆಗೆ ನಡೆದು ಹೋಗುತ್ತಿದ್ದಾಗ ಆರೋಪಿ ಮುಕುಂದ ಅವಳನ್ನು ನೋಡಿ ಮಾತನಾಡಿಸಿ, ಪ್ರವಾಸಿ ಸ್ಥಳಕ್ಕೆ ಕರೆದುಕೊಂಡು ಹೋಗುತ್ತೇನೆ ಬರುತ್ತೀಯಾ ಎಂದು ಕೇಳುತ್ತಾನೆ. ಆಗ ಅವಳು ತನ್ನ ಜೊತೆಗಿದ್ದ ಸ್ನೇಹಿತೆಯ ಕೈಯಲ್ಲಿ ಶಾಲಾ ಬ್ಯಾಗ್‌ನ್ನು ನೀಡಿ ಮುಕುಂದನೊಂದಿಗೆ ಹೋಗುತ್ತಾಳೆ. ಆಗ ಮುಕುಂದ ಆ ಬಾಲಕಿಯನ್ನು ಬೇರೆ ಸ್ಥಳವೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ, ಕೊಲೆಗೈದು, ಕೊಲೆ ಮಾಡಿಲ್ಲ ಎಂಬ ರೀತಿಯಲ್ಲಿ ನಟಿಸುತ್ತಿರುತ್ತಾನೆ. ಆಗ ಮೃತಳ ಪೋಷಕರು ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮೇಲೆ ಆರೋಪಿಯೇ ಖುದ್ದಾಗಿ ಬಂದು ಪೊಲೀಸರ ಮುಂದೆ ಸೌಮ್ಯಳನ್ನು ಕೊಲೆ ಮಾಡಿರುವುದಾಗಿ ಹೇಳುತ್ತಾನೆ.

ಆಗ ಪೊಲೀಸರು ತನಿಖೆ ನಡೆಸಿ ಆರೋಪಿ ಮುಕುಂದನ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಆರೋಪ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹೀಗಾಗಿ, ಮಧುಗಿರಿ ನ್ಯಾಯಾಲಯವು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು.

ಆದರೆ, ಆರೋಪಿ ಮುಕುಂದ ಪ್ರಕರಣದಿಂದ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದನು. ಹೀಗಾಗಿ, ನ್ಯಾಯಾಲಯವು ಆರೋಪಿ ಮುಕುಂದ, ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದಕ್ಕೆ ಯಾವುದೇ ಬಲವಾದ ಸಾಕ್ಷಾಧಾರಗಳು ಇಲ್ಲವೆಂದು ಹೇಳಿ ಕೆಳ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ರದ್ದುಗೆ ೂಳಿಸಿ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿತು.

ಸರಕಾರದ ಪರ ರಾಜ್ಯ ಹೆಚ್ಚುವರಿ ಸರಕಾರಿ ಅಭಿಯೋಜಕ ವಿಜಯಕುಮಾರ ಮಜಗೆ ಅವರು ವಾದಿಸಿದರು, ಆರೋಪಿ ಮುಕುಂದ ಪರ ವಕೀಲ ಪವನ್ ಸಾಗರ್ ಅವರು ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News