×
Ad

ಸೆ.17 ರಂದು ‘ಅಭಿನವ’ ಯುವಜನ ಸಮಾವೇಶ

Update: 2017-09-15 18:40 IST

 ಬೆಂಗಳೂರು, ಸೆ. 15: ‘ಅಭಿನವ’ ಎಂಬ ಯುವಜನ ಸಮಾವೇಶವನ್ನು ಸೆ.17 ರಂದು ಜೆ.ಪಿ.ನಗರದ ಸಂಸ್ಕೃತಿ ಬೃಂದಾವನ ಸಮಾವೇಶ ಕೇಂದ್ರದಲ್ಲಿ ರೋಟರಿ ಕ್ಲಬ್ ಜಿಲ್ಲೆ 3190 ವತಿಯಿಂದ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನಾ ಸಮಿತಿ ಅಧ್ಯಕ್ಷ ಬಿ.ವಿ.ರಾಬಿನ್, ಸಮಾವೇಶದಲ್ಲಿ ಇಂದಿನ ಪೀಳಿಗೆಯ ಯುವಕರ ಮುಂದಿರುವ ಸವಾಲುಗಳು, ಅದನ್ನು ಎದುರಿಸುವ ವಿಧಾನಗಳ ಕುರಿತು ಚರ್ಚೆ, ಸಂವಾದಗಳು ನಡೆಯುತ್ತವೆ. ಅಲ್ಲದೆ, ಸಮಾಜದಲ್ಲಿ ಯುವಜನರ ತಲ್ಲಣಗಳ ಕುರಿತು ಸುದೀರ್ಘ ವಿಶ್ಲೇಷಣೆ ನಡೆಯಲಿದೆ ಎಂದು ಹೇಳಿದರು.

ಸಮಾವೇಶವನ್ನು ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ ಸತ್ಯಾರ್ಥಿ ಉದ್ಘಾಟಿಸಲಿದ್ದು, ಲೇಖಕ ಡಾ.ಆರ್.ಬಾಲಸುಬ್ರಮಣ್ಯಂ, ಜಿಲ್ಲಾ ಗವರ್ನರ್ ಆಶಾ ಪ್ರಸನ್ನ ಕುಮಾರ್, ಪಿಡಿಪಿ ಆಪ್ತ ಸಲಹೆಗಾರ ಡಾ.ಪಿ.ಎಮ್.ಬನಸಾಲಿ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ರೊಟೇರಿಯನ್ ಭಾಗ್ಯಶ್ರೀ ಮತ್ತು ಪವನ್ ಅವರು ‘ಪೊಲೀಯೋ ಕೊನೆಗಾಣಿಸಿ’ ಎಂಬ ಹೆಸರಿನ 20 ಸಾವಿರ ಕಿ.ಮೀ.ಗಳಷ್ಟು ಸೈಕಲ್‌ಗಳ ಮೂಲಕ ಭಾರತ ಯಾತ್ರೆ ಹಮ್ಮಿಕೊಳ್ಳಲಿದ್ದು, ಕೈಲಾಶ್ ಸತ್ಯಾರ್ಥಿ ಇದಕ್ಕೆ ಚಾಲನೆ ನೀಡುವರು ಹಾಗೂ ಸಮಾಜದಲ್ಲಿ ಸಾಧನೆ ಮಾಡಿರುವ ಯುವಕರನ್ನು ಗುರುತಿಸಿ ಅವರಿಗೆ ‘ಯುವ ಸಾಧಕ ಪ್ರಶಸ್ತಿ’ ನೀಡಿ ಸನ್ಮಾನಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News