ಸೆ.16 ರಂದು ರಾಷ್ಟ್ರೀಯ ಸಮ್ಮೇಳನಕ್ಕೆ ಸಿಎಂ ಚಾಲನೆ
ಬೆಂಗಳೂರು, ಸೆ. 15: ಆರೋಗ್ಯ ಸೇವೆಯಲ್ಲಿನ ಗುಣಮಟ್ಟದ ಹೆಚ್ಚಿಸುವ ದೃಷ್ಟಿಯಿಂದ ‘ವೈದ್ಯಕೀಯ ನೈತಿಕ ಮೌಲ್ಯ ಮತ್ತು ಆಡಳಿತ ಸುಧಾರಣೆ’ ಸಂಬಂಧ ಸೆ.16 ಇಲ್ಲಿನ ಸೆಂಟ್ರಲ್ ಕಾಲೇಜು ಆವರಣದಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ‘ಮ್ಯಾನ್ಯುಯಲ್ ಆನ್ ಮೆಡಿಕಲ್ ಎಥಿಕ್ಸ್ ಆ್ಯಂಡ್ ಪ್ರೊಫೆಷನಲಿಸಂ’ ಎಂಬ ಕೈಪಿಡಿ ಲೋಕಾರ್ಪಣೆ ಮಾಡಲಿದ್ದಾರೆ. ಆರೋಗ್ಯ ಇಲಾಖೆ ಕಾರ್ಯದರ್ಶಿ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಆರೋಗ್ಯ ಸೇವಾ ಸಂಘ-ಸಂಸ್ಥೆಗಳು, ಖಾಸಗಿ ಆಸ್ಪತ್ರೆಗಳು, ಕಾನೂನು ತಜ್ಞರು, ಮಾಧ್ಯಮ ಪ್ರತಿನಿಧಿಗಳು, ಖ್ಯಾತ ವೈದ್ಯರು ಸೇರಿದಂತೆ ಆರೋಗ್ಯ ಸೇವಾ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ವಿವಿಧ ಗೋಷ್ಠಿಗಳು ನಡೆಯಲಿದ್ದು, ಇಲ್ಲಿನ ಅಭಿಪ್ರಾಯಗಳನ್ನು ಆಧರಿಸಿ ‘ಬೆಂಗಳೂರು ಘೋಷಣೆ’ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.