×
Ad

ರಸ್ತೆ ವಿಭಜಕಕ್ಕೆ ಕಾರು ಢಿಕ್ಕಿ: ಓರ್ವ ಮೃತ್ಯು

Update: 2017-09-17 19:55 IST

ಬೆಂಗಳೂರು, ಸೆ.17: ಮೂವರು ಅಪ್ರಾಪ್ತರ ಜಾಲಿ ರೈಡ್ ಒಬ್ಬನ ಸಾವಿನಲ್ಲಿ ಅಂತ್ಯವಾಗಿದೆ. ಜಾಲಿರೈಡ್ ತೆರಳಿದ್ದ ಮೂವರು ಅಪ್ರಾಪ್ತ ಹುಡುಗರು ಬೆಂಗಳೂರಿನ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಹೊಸೂರು ಫ್ಲೈ ಓವರ್ ಮೇಲೆ ಈ ಅಪಘಾತ ನಡೆದಿದೆ.

150 ಕಿ.ಮೀ.ವೇಗದಲ್ಲಿ ಬಾಲಕರು ಕಾರಿನ ನಿಯಂತ್ರಣ ಕಳೆದುಕೊಂಡಿದ್ದು, ಸರಣಿ ಅಪಘಾತ ಸಂಭವಿಸಿದೆ. ಸ್ಕೋಡಾ, ಇನ್ನೋವಾ ಕಾರುಗಳಲ್ಲಿ ಬಾಲಕರು ಜಾಲಿರೈಡ್ ಬಂದಿದ್ದರು ಎನ್ನಲಾಗಿದೆ.

ಸ್ಕೋಡಾ ಕಾರು ಮೊದಲು ಅಪಘಾತಕ್ಕೀಡಾಗಿದ್ದು, ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿದ್ದ ಬಾಲಕನ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನೋವಾ ಕಾರು ನಿಯಂತ್ರಣ ತಪ್ಪಿಎರಡು ಅಡಿ ಪಕ್ಕದಲ್ಲಿದ್ದ ಮತ್ತೊಂದು ರಸ್ತೆಗೆ ಹಾರಿದೆ. ಇದರಿಂದ ಬಾಲಕನು ಮೃತಪಟ್ಟಿದ್ದಾನೆ. ರವಿವಾರ ಬೆಳಗ್ಗೆ 2 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ.

ಹೊಸೂರು ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News