ಮದೀನತುಲ್ ಮುನವ್ವರ ಮೂಡಡ್ಕ ಹಯ್ಯ್ ಅಲ್ ಮುರೂಜ್ ಸಮಿತಿ ಅಸ್ತಿತ್ವಕ್ಕೆ

Update: 2017-09-18 05:08 GMT

ರಿಯಾದ್, ಸೆ. 18: ಬೆಳ್ತಂಗಡಿ ತಾಲೂಕಿನ ಸರಳಿಕಟ್ಟೆ, ಮೂಡಡ್ಕದಲ್ಲಿ ಮುಸ್ಲಿಂ ಸಮಾಜದ ಬಡ ಹಾಗೂ ಅನಾಥ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಕಳೆದ ಹತ್ತು ವರ್ಷಗಳ ಹಿಂದೆ ಜಿಲ್ಲೆಯ  ವಿದ್ವಾಂಸರಲ್ಲೊಬ್ಬರಾಗಿದ್ದ ದಿ. ಟಿ.ಹೆಚ್. ಇಬ್ರಾಹಿಂ ಮುಸ್ಲಿಯಾರ್ ತೆಕ್ಕಾರ್ ಆರಂಭಿಸಿದ್ದ ಅಲ್ ಮದೀನತುಲ್ ಮುನವ್ವರ ಶೈಕ್ಷಣಿಕ ಸಂಸ್ಥೆಯ ಹಯ್ಯ್ ಅಲ್ ಮುರೂಜ್ ಸಮಿತಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿತು.

ಮದೀನತುಲ್ ಮುನವ್ವರ ಮೂಡಡ್ಕ ರಿಯಾದ್ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಾಕ್  ಹಾಜಿ ಉಜಿರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉರುವಾಲು ಪದವು ಡೆವಲಪ್ಮೆಂಟ್ ಕಮಿಟಿ (ಯುಡಿಸಿ) ರಿಯಾದ್ ಸಮಿತಿಯ ಅಧ್ಯಕ್ಷ  ಪಿಕೆ ದಾವೂದ್ ಸಅದಿ ಉರುವಾಲು ಪದವು ಕಾರ್ಯಕ್ರಮ ಉದ್ಘಾಟಿಸಿದರು.

ಸಂಸ್ಥೆಯ ರಿಯಾದ್ ಸಮಿತಿ ಓರ್ಗನೈಝರ್ ಅಬ್ದುಲ್ ಕರೀಂ ಲತೀಫಿ ಬೇಂಗಿಲ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಶೈಕ್ಷಣಿಕ ಚಟುವಟಿಕೆಗಳನ್ನು ವಿವರಿಸಿ ಮಾತನಾಡುತ್ತಾ, ಈಗಾಗಲೇ ಸಂಸ್ಥೆಯು ಆಂಗ್ಲ ಮಾಧ್ಯಮ ಶಾಲೆ, ಇಸ್ಲಾಮೀ ದಾವಾ ಕಾಲೇಜು, ಅನಾಥ ಹೆಣ್ಣು ಮಕ್ಕಳ ವಿಶೇಷ ಹೋಮ್ ಕೇರ್ ಸೇರಿದಂತೆ ಸಮಾಜದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಮೇಲಕ್ಕೆತ್ತುವ ದೃಷ್ಟಿಯಿಂದ  ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ ಎಂದು ಹೇಳಿದರು.

ಕೆಸಿಎಫ್ ಸದಸ್ಯ ಜಾಬಿರ್ ಕಳಂಜಿಬೈಲ್ ಕಿರಾಅತ್ ನಡೆಸಿದರು. ವೇದಿಕೆಯಲ್ಲಿ ಸಂಸ್ಥೆಯ ರಿಯಾದ್ ಸಮಿತಿ ಉಪಾಧ್ಯಕ್ಷರಾದ  ಯೂಸುಫ್ ಹಾಜಿ  ಕಳಂಜಿಬೈಲ್, ಹೈದರ್ ಹಾಜಿ ಸರಳಿಕಟ್ಟೆ, ಅಬ್ಬಾಸ್ ಮಾಣಿ, ಅಬ್ದುಲ್ ರಝಾಕ್ ಹಾಜಿ ಮಾಚಾರ್, ಹಬೀಬ್ ಟಿ.ಹೆಚ್.ತೆಕ್ಕಾರ್ ಹಾಗೂ ಇತರರು ಉಪಸ್ಥಿತರಿದ್ದರು.

ಹಯ್ಯ್ ಅಲ್ ಮುರೂಜ್ ನೂತನ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಅಬ್ದುಲ್ ರಝಾಕ್ ಹಾಜಿ ಉಜಿರೆ, ಸಲಹೆಗಾರರಾಗಿ ಹೈದರ್ ಹಾಜಿ ಸರಳಿಕಟ್ಟೆ, ಕೆವಿ ಯೂಸುಫ್ ಹಾಜಿ ಕಳಜಿಬೈಲ್, ರಝಾಕ್ ಹಾಜಿ ಮಾಚಾರ್, ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್  ಸರಳಿಕಟ್ಟೆ, ಉಪಾಧ್ಯಕ್ಷರಾಗಿ ಎನ್ ಸುಲೈಮಾನ್ ನೆಲ್ಯಾಡಿ, ಅಬ್ದುಲ್ ರಝಾಕ್ ಉಜಿರೆ, ಪ್ರಧಾನ ಕಾರ್ಯದರ್ಶಿಯಾಗಿ ಪಿಕೆ ದಾವೂದ್ ಸಅದಿ ಉರುವಾಲು ಪದವು, ಜೊತ ಕಾರ್ಯದರ್ಶಿಗಳಾಗಿ ನೌಮಾನ್ ಸರಳಿಕಟ್ಟೆ, ಜಾಬಿರ್ ಕಳಂಜಿಬೈಲು, ಕೋಶಾಧಿಕಾರಿ ಇಬ್ರಾಹಿಂ ಕಟ್ಟತ್ತಾರು, ಸಂಘಟನೆ ಕಾರ್ಯದರ್ಶಿ ಮುಸ್ತಫಾ ವಿಟ್ಲ, ಜೂತೆ ಕಾರ್ಯದರ್ಶಿ ನೌಶಾದ್ ಬಾಂಬಿಲ ಹಾಗೂ ಇತರರನ್ನು ಸಮಿತಿ ಸದಸ್ಯರನ್ನಾಗಿ ಮಾಡಲಾಯಿತು.

ನೌಮಾನ್ ಸರಳಿಕಟ್ಟೆ ಸ್ವಾಗತಿಸಿ,  ನೂತನ ಪ್ರದಾನ ಕಾರ್ಯದರ್ಶಿ ಪಿಕೆ ದಾವೂದ್ ಸಅದಿ ಉರುವಾಲು ಪದವು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News